ಸೇನಾ ಅಭ್ಯಾಸದ ವೇಳೆ 3 ಕ್ಷಿಪಣಿಗಳು ಮಿಸ್‌ಫೈರಿಂಗ್ – ತನಿಖೆಗೆ ಆದೇಶ…

37
firstsuddi

ಜೈಸಲ್ಮೇರ್ : ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಭಾರತೀಯ ಸೇನೆಯು ಗುಂಡಿನ ಅಭ್ಯಾಸ ನಡೆಸುತ್ತಿದ್ದ ವೇಳೆ ಮೂರು ಕ್ಷಿಪಣಿಗಳು ಮಿಸ್‌ಫೈರಿಂಗ್ ಆಗಿದೆ.

ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಫೈರಿಂಗ್ ಅಭ್ಯಾಸ ನಡೆಯುತ್ತಿದ್ದಾಗ ಮೇಲ್ಮೈಯಿಂದ ಆಕಾಶಕ್ಕೆ ಹಾರುವ ಕ್ಷಿಪಣಿಗಳು ತಾಂತ್ರಿಕ ದೋಷದಿಂದ ಮಿಸ್‌ಫೈರ್ ಆಗಿದ್ದವು. ಒಂದು ಕ್ಷಿಪಣಿಯ ಅವಶೇಷಗಳು ಅಜಸರ್ ಗ್ರಾಮದ ಹೊಲವೊಂದರಲ್ಲಿ ಪತ್ತೆಯಾಗಿದೆ. ಮತ್ತೊಂದು ಕ್ಷಿಪಣಿಯ ಅವಶೇಷ ಸತ್ಯಯ್ಯ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಮೂರನೇ ಕ್ಷಿಪಣಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಪೊಲೀಸರು ಮತ್ತು ಸೇನಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪತನಗೊಂಡ ಕ್ಷಿಪಣಿಗಳ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. ತಾಂತ್ರಿಕ ದೋಷದಿಂದಾಗಿ ಕ್ಷಿಪಣಿಗಳು ಮಾರ್ಗದಿಂದ ವಿಮುಖವಾಗಿ ಚಲಿಸಿವೆ. ಈ ಕುರಿತು ತನಿಖೆ ಆರಂಭಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೇನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಮಿತಾಭ್ ಶರ್ಮಾ ಖಚಿತಪಡಿಸಿದ್ದಾರೆ.