ಸೌದಿ ಅರೇಬಿಯಾ ಕ್ಲಬ್ ಸೇರಿದ ಕ್ರಿಸ್ಟಿಯಾನೊ ರೊನಾಲ್ಡೊ.

74
firstsuddi

ದುಬೈ : ವಿಶ್ವಶ್ರೇಷ್ಠ ಫುಟ್ಬಾಲಿಗ ಕ್ರಿಶ್ಚಿಯಾನೊ ರೊನಾಲ್ಡೊ ಸೌದಿ ಅರೇಬಿಯಾದ ಅಲ್- ನಸ್ರ್ ಕ್ಲಬ್ ಪರ ಮುಂದಿನ ಎರಡು ವರ್ಷಗಳ ಅವಧಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಈ ಹಿಂದೆ, ರೊನಾಲ್ಡೊ ಇಂಗ್ಲೆಂಡ್ ನ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುತ್ತಿದ್ದರು. ಆದರೆ ವಿಶ್ವಕಪ್ ಆರಂಭಕ್ಕೂ ಮುನ್ನ ನೀಡಿದ ಸಂದರ್ಶನದಲ್ಲಿ ರೊನಾಲ್ಡೊ ಕ್ಲಬ್ ಮೇಲೆ ಆರೋಪಗಳ ಸುರಿಮಳೆಗೈದಿದ್ದರು. ಆ ನಂತರ ಸಹಮತದಿಂದ ರೊನಾಲ್ಡೊ ಮ್ಯಾಂಚೆಸ್ಟರ್ ಕ್ಲಬ್ ತೊರೆದಿದ್ದರು.

ಇದೀಗ 2025ರ ವರೆಗೆ ಅಲ್ ನಸ್ರ್ ಪರ ಆಡಲು ಒಪ್ಪಿಕೊಂಡಿದ್ದಾರೆ ಎಂದು ಸೌದಿ ಕ್ಲಬ್ ಹೇಳಿಕೆ ನೀಡಿದೆ. ಆದರೆ ಹಣಕಾಸು ವ್ಯವಹಾರವನ್ನು ಬಹಿರಂಗಪಡಿಸಿಲ್ಲ. ಆದ್ರೆ ರೊನಾಲ್ಡೊನೊಂದಿಗೆ 200 ಮಿಲಿಯನ್ ಯುರೋಗಿಂತಲೂ ಅಧಿಕ ಮೌಲ್ಯದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕ್ಲಬ್ ನೊಂದಿಗೆ ಸಹಿ ಹಾಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ರೊನಾಲ್ಡೊ, ಹೊಸ ಫುಟ್ಬಾಲ್ ಲೀಗ್ ಅನ್ನು ಬೇರೆ ದೇಶದಲ್ಲಿ ಆಡಲು ನಾನು ಸಿದ್ಧನಿದ್ದೇನೆ. ವಿಶ್ವಕಪ್ ನಲ್ಲಿನ ಸೌದಿ ಅರೇಬಿಯಾ ತಂಡದ ಇತ್ತೀಚಿನ ಪ್ರದರ್ಶನ ಜಗತ್ತೇ ಅಚ್ಚರಿಯಿಂದ ನೋಡಿದೆ. ಈಗ ಏಷ್ಯಾದಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಅಲ್ಲದೆ ನನ್ನ ಹೊಸ ತಂಡದ ಸದಸ್ಯರನ್ನು ಭೇಟಿ ಮಾಡಲು ನಾನು ಉತ್ಸುಕನಾಗಿದ್ದೇನೆ. ಅವರೊಂದಿಗೆ ಸೇರಿ ನಾನು ಕ್ಲಬ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತೇನೆ ಎಂದಿದ್ದಾರೆ.