ಸ್ಕೂಟಿಗೆ ಕಾರು ಡಿಕ್ಕಿ ನರ್ಸಿಂಗ್ ಕಾಲೇಜು ಉಪನ್ಯಾಸಕಿ ಸಾವು…

92

ಮಂಗಳೂರು: ಸ್ಕೂಟಿಗೆ ಆಲ್ಟೋ ಕಾರೊಂದು ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಉಪನ್ಯಾಸಕಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸೋಮವಾರ ನಡೆದಿದೆ ಮೃತ ಉಪನ್ಯಾಸಕಿಯನ್ನು ವಾಮಂಜೂರು ನಿವಾಸಿ ಪ್ರಿಯಾಂಕ (31) ಎಂದು ಗುರುತಿಸಲಾಗಿದೆ.

ಜುಲೈ 10ರಂದು ಪ್ರಿಯಾಂಕ ಅವರು ತಮ್ಮ ಸ್ಕೂಟಿಯಲ್ಲಿ ಹರಿಪದವು ಮೂಲಕ ವಾಮಂಜೂರಿಗೆ ತೆರಳುತ್ತಿದ್ದ ವೇಳೆ ನಗರದ ಯೆಯ್ಯಾಡಿ ಹರಿಪದವಿನಲ್ಲಿ ವೇಗವಾಗಿ ಬರುತ್ತಿದ್ದ ಕಾರು ಢಿಕ್ಕಿಯಾಗಿದ್ದು, ಪರಿಣಾಮ ಪ್ರಿಯಾಂಕ ಮಗುಚಿ ಬಿದ್ದು ತಲೆಗೆ ಗಂಭೀರ ಗಾಯಗಳಾಗಿದ್ದವು.

ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ ಈ ಕುರಿತು ಮಂಗಳೂರು ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಕೋಟೆಕಾರು ನಿವಾಸಿಯಾದ ಪ್ರಿಯಾಂಕ ಅವರು ಉಳ್ಳಾಲದ ನರ್ಸಿಂಗ್ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದರು ಎಂದು ತಿಳಿದುಬಂದಿದೆ.