ಸ್ಯಾಂಡಲ್‍ವುಡ್ ಡ್ರಗ್ಸ್ ನಂಟು : ಪ್ರಕರಣದ 5ನೇ ಆರೋಪಿ ವೈಭವ್ ಜೈನ್ ಬಂಧನ…

183
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ಡ್ರಗ್ಸ್ ನಂಟು ಪ್ರಕರಣಕ್ಕೆ ಸಂಬಂಧಿಸಿದ 5ನೇ ಆರೋಪಿ ವೈಭವ್ ಜೈನ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಯಾಗಿರುವ ವೈಭವ್ ಜೈನ್ ಅವರನ್ನು ಬೆಂಗಳೂರಿನ ವೈಯ್ಯಾಲಿಕಾವಲ್‍ನ ತಮ್ಮ ನಿವಾಸದಲ್ಲಿ ಬಂಧಿಸಲಾಗಿದೆ. ಈ ಮೊದಲು ಬಂಧಿಸಲು ಮುಂದಾದಾಗ ತನಗೆ ಕೊರೊನಾ ಪಾಸಿಟಿವ್ ಬಂದಿದ್ದು, ಮನೆಯಲ್ಲೇ ಐಸೋಲೇಷನ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದರು. ಇದರಿಂದ ಇವರ ಬಂಧನ ತಡವಾಗಿ ನಡೆದಿದೆ.
ಈಗಾಗಲೇ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಆಪ್ತ ರವಿಶಂಕರ್ ವಿಚಾರಣೆ ವೇಳೆ ನೀಡಿದ್ದ ಮಾಹಿತಿಯನ್ನು ಆಧರಿಸಿ ವೈಭವ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವೈಭವ್ ಜೈನ್ ಡ್ರಗ್ ಪೆಡ್ಲರ್ ವಿರೇನ್ ಖನ್ನಾರೊಂದಿಗೆ ನೇರ ಸಂಪರ್ಕವನ್ನು ಬೆಳೆಸಿಕೊಂಡಿದ್ದರು ಎನ್ನಲಾಗಿದ್ದು, ನಗರದ ರೆಸಾರ್ಟ್ ಹಾಗೂ ಹೋಟೆಲ್‍ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಡ್ರಗ್ ವಿನಿಮಯ ಮಾಡುತ್ತಿದ್ದರು. ಹಾಗೂ ಪಾರ್ಟಿಗೆ ಯಾರನ್ನು ಆಹ್ವಾನಿಸಬೇಕು ಎಂಬ ಜವಾಬ್ದಾರಿಯನ್ನು ವೈಭವ್ ಜೈನ್ ನಿಭಾಯಿಸುತ್ತಿದ್ದರು ಎಂದು ರವಿಶಂಕರ್ ಸಿಸಿಬಿ ವಿಚಾರಣೆ ವೇಳೆ ತಿಳಿಸಿದ್ದಾರೆ.