ಚಿಕ್ಕಮಗಳೂರು: ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಮಾಜಸೇವೆಗೆ ಒತ್ತು ನೀಡಬೇಕು ಎಂದು ಕ್ಲಬ್‍ನ ವಲಯಾಧ್ಯಕ್ಷೆ ಬಿ.ಸಿ.ಅನುಸೂಯಾ ಜಗದೀಶಪ್ಪ ಸಲಹೆ ಮಾಡಿದರು.
ನಗರದ ಲಯನ್ಸ್ ಸೇವಾಭವನದಲ್ಲಿ ಭಾನುವಾರ ನಡೆದ ಕ್ಲಬ್‍ನ ಪದಾಧಿಕಾರಿಗಳು ಮತ್ತು ಸದಸ್ಯರ ವಲಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣ, ಅಧಿಕಾರ, ಅಂತಸ್ತು ಮತ್ತು ಕೀರ್ತಿ ಸಮಾಜದಲ್ಲಿ ಗೌರವ ತರುತ್ತವೇಯಾದರೂ ಅದರಿಂದ ನಮಗೆ ಮಾನಸಿಕ ಶಾಂತಿ, ನೆಮ್ಮದಿ ದೊರೆಯುವುದಿಲ್ಲ. ಧಾನ ಮತ್ತು ಸೇವೆ ನಮ್ಮ ಬದುಕನ್ನು ಸಾರ್ಥಕಗೊಳಿಸುತ್ತವೆ ಎಂದು ಕಿವಿಮಾತು ಹೇಳಿದರು.










