ಹಾಸನ : ಬೈಕ್ ಮತ್ತು ಕೆ.ಎಸ್.ಆರ್.ಟಿ.ಸಿಬಸ್ ನಡುವೆ ಮುಖಾಮುಖಿ ಡಿಕ್ಕಿ-ಇಬ್ಬರು ಯುವತಿಯರ ಸಾವು…

1102
firstsuddi

ಹಾಸನ : ಬೈಕ್ ಮತ್ತು ಕೆ.ಎಸ್.ಆರ್.ಟಿ.ಸಿಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವತಿಯರು ಮೃತಪಟ್ಟಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ತಾಲ್ಲೂಕಿನ ನರಿಹಳ್ಳಿ ಬಳಿ ನಡೆದಿದೆ. ವಡ್ಡರಹಟ್ಟಿ ಗ್ರಾಮದ ಗಿರಿಜಾ(19 ಹಾಗೂ ಚಂದ್ರಕಲಾ(18) ಮೃತ ಯುವತಿಯರು ಎನ್ನಲಾಗಿದ್ದು, ಮೃತರು ಟಿವಿಎಸ್ ಬೈಕ್ ನಲ್ಲಿ ತಮ್ಮ ಊರಿನಿಂದ ಹಿರೀಸಾವೆ ಕಡೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಬಸ್‍ಗೆ ನೇರವಾಗಿ ಡಿಕ್ಕಿಯಾದ ಪರಿಣಾಮ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಯುವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹಿರೀಸಾವೆ ಪೊಲೀಸರು ಭೇಟಿ ನೀಡಿ ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.