ಹಾಸನ : ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಚೈನ್ ಕಸಿದು ಸರಗಳ್ಳರು ಪರಾರಿ…

243
firstsuddi

ಹಾಸನ : ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಸರಗಳ್ಳರು ಪರಾರಿಯಾಗಿರುವ ಘಟನೆ ವಿದ್ಯಾನಗರ ಹಾಗೂ ಶಂಕರೀಪುರಂನಲ್ಲಿ ನಡೆದಿದೆ. ನಗರದ ಎರಡು ಬಡಾವಣೆಯ ರಸ್ತೆಯಲ್ಲಿ ಮಹಿಳೆಯರು ನಡೆದುಕೊಂಡು ಹೋಗುತ್ತಿದ್ದ ವೇಳೆ ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ಲೀಲಾವತಿ ಅವರ 30ಗ್ರಾಂ ಹಾಗೂ ಲಲಿತಾ ಅವರ 20 ಗ್ರಾಂ ಚಿನ್ನದ ಸರವನ್ನು ಕಸಿದು  ಪರಾರಿಯಾಗಿದ್ದು, ಸರಗಳ್ಳರು ಕೃತ್ಯವೆಸಗಿ‌ ಬೈಕ್ ನಲ್ಲಿ ಹೋಗುತ್ತಿದ್ದ ದೃಶ್ಯ ಎಂಜಿ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಬಡಾವಣೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.