ಹಾಸನ : ಹೆಲ್ಮೆಟ್ ಕೇಸ್ ಹಾಕುತ್ತಿದ್ದ ಸಂಚಾರಿ ಠಾಣೆ ಸಬ್ ಇನ್ಸ್ ಪೆಕ್ಟರ್ ಗೆ ಬೈಕ್ ಡಿಕ್ಕಿ…

609
firstsuddi

ಹಾಸನ : ಹೆಲ್ಮೆಟ್ ಕೇಸ್ ಹಾಕುತ್ತಿದ್ದ ಸಂಚಾರಿ ಠಾಣೆ ಸಬ್ ಇನ್ಸ್ ಪೆಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದಿರುವ ಘಟನೆ ನಗರದ ಸಂತೇಪೇಟೆಯಲ್ಲಿ ನಡೆದಿದೆ. ಕುಸುಮಾ ಗಾಯಗೊಂಡ ಸಂಚಾರಿ ಠಾಣೆ ಸಬ್ ಇನ್ಸ್ ಪೆಕ್ಟರ್ ಎಂದು ಗುರುತಿಸಲಾಗಿದ್ದು, ಕುಸುಮಾ ಅವರು ನಗರದ ಸಂತೇಪೇಟೆಯಲ್ಲಿ ಹೆಲ್ಮೆಟ್ ಕೇಸ್ ಹಾಕುತ್ತಿದ್ದ ವೇಳೆ ಬೈಕ್ ನಲ್ಲಿ ಹೆಲ್ಮೆಟ್ ಧರಿಸದೇ ಬರುತ್ತಿದ್ದ ಯುವಕರನ್ನು ತಡೆಯಲು ಮುಂದಾದಾಗ ಯುವಕರು ಸಬ್ ಇನ್ಸ್ ಪೆಕ್ಟರ್ ಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದು, ಬೈಕ್ ಡಿಕ್ಕಿಯಾದ ರಭಸಕ್ಕೆ ಕೆಳಗೆ ಬಿದ್ದ ಕುಸುಮಾ ಅವರ ಮುಖಕ್ಕೆ ಗಂಭೀರ ಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.