ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ವಸ್ತು ಸ್ಪೋಟ-ಓರ್ವನಿಗೆ ಗಂಭೀರ ಗಾಯ…

262
firstsuddi

ಹುಬ್ಬಳ್ಳಿ : ಅನುಮಾನಾಸ್ಪದ ವಸ್ತುವೊಂದು ಸ್ಪೋಟಗೊಂಡು ಓರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ವಿಜಯವಾಡ-ಹುಬ್ಬಳ್ಳಿ ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ ಅನುಮಾನಾಸ್ಪದವಾಗಿ ಬಿಟ್ಟು ಹೋಗಿದ್ದ ರಟ್ ಬಾಕ್ಸನ್ನು ಅಧಿಕಾರಿಗಳು ಪ್ಲಾಟ್ ಫಾರಂ ನಲ್ಲಿ ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದ ಹುಸೇನ್ ಸಾಬ್ ಅವರ ಬಳಿ ತೆರೆಯುವಂತೆ ಹೇಳಿದ್ದಾರೆ. ಈ ವೇಳೆ ಹುಸೇನ್ ಸಾಬ್ ಅವರು ಬಾಕ್ಸನ್ನು ತೆರೆದು ಅದರೊಳಗಿದ್ದ ಟಿಫನ್ ಬಾಕ್ಸನ್ನು ತೆರೆಯುತ್ತಿದ್ದಂತೆ ಬಾಕ್ಸ್ ಸ್ಪೋಟಗೊಂಡಿದ್ದು, ಹುಸೇನ್ ಸಾಬ್ ಸೇರಿದಂತೆ ಇಬ್ಬರಿಗೆ ಗಾಯವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಘಟನಾ ಸ್ಥಳಕ್ಕೆ ಮಹಾನಗರ ಪೊಲೀಸ್, ಡಿಸಿಪಿ, ರೈಲ್ವೇ ಪೊಲೀಸರು ಶ್ವಾನದಳದ ಜೊತೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ರೈಲ್ವೇ ನಿಲ್ದಾಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.