ಹೃದಯಾಘಾತದಿಂದ ಬಿಎಸ್‍ವೈ ಬೆಂಗಾವಲು ವಾಹನ ಚಾಲಕ ನಿಧನ…

52
firstsuddi

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಬೆಂಗಾವಲು ವಾಹನ ಚಾಲಕ ತಿರುಮಲೇಶ್ ಅವರು ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಳೆದ 16 ವರ್ಷಗಳಿಂದ ಯಡಿಯೂರಪ್ಪ ಅವರ ಬಳಿಯೇ ಬೆಂಗಾವಲು ಸಿಬ್ಬಂದಿಯಾಗಿ ತಿರುಮಲೇಶ್ ಕರ್ತವ್ಯದಲ್ಲಿದ್ದರು. ತಮ್ಮ ಬೆಂಗಾವಲು ವಾಹನ ಚಾಲಕ ತಿರುಮಲೇಶ್ ನಿಧನಕ್ಕೆ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.