ಹೊಳೆಕೂಡಿಗೆಯಲ್ಲಿ ಕಾಡಾನೆ ಹಾವಳಿ – ಅಪಾರ ಪ್ರಮಾಣದ ಬೆಳೆಹಾನಿ…

125
firstsuddi

ಕೊಟ್ಟಿಗೆಹಾರ : ಹೊಳೆಕೂಡಿಗೆ ಗ್ರಾಮದಲ್ಲಿ ಕಾಡಾನೆ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

ಕಾಡಾನೆ, ನೂರಾರು ಬಾಳೆಗಿಡಗಳನ್ನು ತುಳಿದು ನಜ್ಜುಗುಜ್ಜಾಗಿಸಿದ್ದು ಕಾಫಿಗಿಡಗಳನ್ನು ಮುರಿದು ಹಾಕಿದೆ. ಗಿಡನೆಟ್ಟು ಫಸಲು ಕೈ ಸೇರುವ ವೇಳೆಗೆ ಕಾಡಾನೆ ಹಾವಳಿಯಿಂದ ಬೆಳೆ ಹಾನಿಯಾಗಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೊಳೆಕೂಡಿಗೆ ಗ್ರಾಮದ ಬಾಸಮ್ಮ, ರಮೇಶ್‍ಗೌಡ, ಲಕ್ಷ್ಮಣಗೌಡ, ಸತೀಶ್‍ಗೌಡ ಎಂಬುವವರಿಗೆ ಸೇರಿದ ಕೃಷಿಭೂಮಿಗೆ ನುಗ್ಗಿ ಕಾಡಾನೆ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ.

ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿಗಳಾದ ರಂಗನಾಥ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಾನೆ ಹಾವಳಿಯಿಂದ ಬೆಳೆಹಾನಿಯಾಗಿರುವ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.