ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಇಬ್ಬರ ಶವ…

86
firstsuddi

ರಾಮನಗರ : ಜಿಲ್ಲೆಯ ಮಾಗಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಇಬ್ಬರ ಶವ ಪತ್ತೆಯಾಗಿವೆ. ಮೃತರನ್ನು ಜಿಲ್ಲೆಯ ಮಾಗಡಿ ತಾಲೂಕಿನ ಬ್ಯಾಲಕೆರೆ ಗ್ರಾಮದ ನಿವಾಸಿ ಮೋಹನ್ (24) ಹಾಗೂ ದಾಸೇಗೌಡನಪಾಳ್ಯ ಗ್ರಾಮದ ಪುಷ್ಪಲತಾ (24) ಎಂದು ಗುರುತಿಸಲಾಗಿದೆ.

ಟ್ರ್ಯಾಕ್ಟರ್ ಚಾಲಕನಾಗಿರುವ ಮೋಹನ್ ಗೆ ಈಗಾಗಲೇ ಮದುವೆಯಾಗಿ ಮಗು ಸಹ ಇದೆ. ಪುಷ್ಪಲತಾ ಅವರು ಕುಣಿಗಲ್ ತಾಲೂಕಿನ ಆಲಗೆರೆ ಗ್ರಾಮದ ಯುವಕನ ಜೊತೆ ವಿವಾಹವಾಗಿದ್ದು, ಅವರಿಗೂ ಮಗುವಿದೆ. ವಾರದ ಹಿಂದಷ್ಟೇ ಪುಷ್ಪಲತಾ ತಾಯಿ ಮನೆ ದಾಸೇಗೌಡನಪಾಳ್ಯಕ್ಕೆ ಬಂದಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾದರೆ, ಯುವಕನ ಶವದ ಕೆಳಗೆ ಮಲಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಪುಷ್ಪಲತಾ ಮತ್ತು ಮೋಹನ್ ಇಬ್ಬರೂ ಪ್ರೀತಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.