ಅರವಿಂದ್ ಸಾವಂತ್ ಅವರ ರಾಜೀನಾಮೆ ಅಂಗೀಕಾರ-ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಹೆಚ್ಚುವರಿ ಸಚಿವರಾಗಿ ಪ್ರಕಾಶ್ ಜವಡೇಕರ್ ನೇಮಕ…

352
firstsuddi

ನವದೆಹಲಿ : ಕೇಂದ್ರ ಸಚಿವ ಸ್ಥಾನಕ್ಕೆ ಅರವಿಂದ್ ಸಾವಂತ್ ಅವರು ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಗೀಕರಿಸಿದ್ದು, ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಹೆಚ್ಚುವರಿ ಸಚಿವರಾಗಿ ಪ್ರಕಾಶ್ ಜವಡೇಕರ್ ಅವರನ್ನು ನೇಮಿಸಲಾಗಿದೆ. ಮಹಾರಾಷ್ಟ್ರ ಸರ್ಕಾರ ರಚನೆಗೆ ಶಿವಸೇನೆ ಮತ್ತು ಬಿಜೆಪಿ ಪಕ್ಷದ ನಡುವಿನ ತಿಕ್ಕಾಟ ತಾರಕಕ್ಕೇರುತ್ತಿದ್ದಂತೆ ಶಿವಸೇನಾ ಸಂಸದ ಹಾಗೂ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಹೆಚ್ಚುವರಿ ಸಚಿವ ಅರವಿಂದ್ ಸಾವಂತ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.