ಆರತಕ್ಷತೆಗೂ ಮುನ್ನವೇ ನವದಂಪತಿ ಶವವಾಗಿ ಪತ್ತೆ…

75
firstsuddi

ರಾಯ್‍ಪುರ್‍ : ಆರತಕ್ಷತೆಗೂ ಮುನ್ನ ನವದಂಪತಿಗಳು ಶವವಾಗಿ ಪತ್ತೆಯಾದ ಘಟನೆ ರಾಯ್‍ಪುರ್‍ ನ, ತ್ರಿಕ್ರಪಾರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಿಜ್ ನಗರದಲ್ಲಿ ನಡೆದಿದೆ.

ದಂಪತಿಗಳ ನಡುವೆ ವಾಗ್ವಾದ ನಡೆದಿದ್ದು, ಪತಿ ಪತ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅಸ್ಲಾಂ (24) ಮತ್ತು ಕಹ್ಕಶಾ ಬಾನೊ (22) ಭಾನುವಾರ ವಿವಾಹವಾಗಿದ್ದು, ಮಂಗಳವಾರ ರಾತ್ರಿ ಅವರ ವಿವಾಹ ಆರತಕ್ಷತೆ ನಡೆಯಬೇಕಿತ್ತು. ಅವರು ತಮ್ಮ ಕೊಠಡಿಯೊಳಗೆ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದಾಗ ವರನ ತಾಯಿ ವಧುವಿನ ಕಿರುಚಾಟವನ್ನು ಕೇಳಿ ಅಲ್ಲಿಗೆ ಬಂದಿದ್ದಾರೆ. ಕೋಣೆಯ ಒಳಗಿನಿಂದ ಲಾಕ್ ಆಗಿತ್ತು, ಇಬ್ಬರ ಬಾಗಿಲು ತೆಗೆಯದ ಕಾರಣ ಹೊರಗಿನಿಂದ ಕುಟುಂಬದ ಸದಸ್ಯರು ಕಿಟಕಿಯ ಮೂಲಕ ಇಣುಕಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಇದೀಗ ಅವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ, ಚಾಕುವನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.