ನವದೆಹಲಿ : ಇಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ನಿರ್ಮಲಾ ಬಜೆಟ್ ಮೇಲೆ ನಿರೀಕ್ಷೆಗಳ ಮಹಾಪೂರವೇ ಇದ್ದು, ಕೊರೊನಾದಿಂದ ತಗ್ಗಿರುವ ಆರ್ಥಿಕತೆಗೆ ಬೂಸ್ಟರ್ ಡೋಸ್ ಸಿಗಬಹುದು ಎನ್ನಲಾಗಿದೆ.
ನಿರ್ಮಲಾ ಸೀತಾರಾಮನ್ ಇಂದು 4ನೇ ಬಾರಿ ಬಜೆಟ್ ಮಂಡಿಸುತ್ತಿದ್ದು, ಇಂದು ಬೆಳಗ್ಗೆ 11ರಿಂದ ಸಂಸತ್ತಿನ ಅಧಿವೇಶನದಲ್ಲಿ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯೂ ಪೇಪರ್ ಲೆಸ್ ಬಜೆಟ್ ಮಂಡನೆಯಾಗಲಿದೆ. ಅಂದಾಜು 90 ರಿಂದ 120 ನಿಮಿಷಗಳ ಕಾಲ ಆಯವ್ಯಯ ಮಂಡಿಸಲಿದ್ದಾರೆ.
ಇನ್ನೂ ಕೊರೊನಾದಿಂದ ಸಂಕಷ್ಟದಲ್ಲಿರುವ ಕೈಗಾರಿಕೆ, ಬ್ಯಾಂಕಿಂಗ್, ಕೃಷಿ ವಲಯ, ಸೇವಾ ವಲಯ, ಸೇರಿದಂತೆ ಎಲ್ಲ ಕ್ಷೇತ್ರಗಳು ಹಾಗೂ ಸಾಮಾನ್ಯ ಜನರ ಚಿತ್ತ ಅವರತ್ತ ನೆಟ್ಟಿದೆ. ಒಟ್ಟಿನಲ್ಲಿ ಎಲ್ಲಾ ಪ್ರಶ್ನೆಗೆ ಇಂದು ಮಧ್ಯಾಹ್ನದ ವೇಳೆ ಉತ್ತರ ಸಿಗಲಿದೆ.










