ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮಧ್ಯೆ ಇಂದು ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸಲಿದೆ. ಒಂದೆಡೆ ಬರೋಬ್ಬರಿ 27 ವರ್ಷಗಳ ಬಳಿಕ ದೀಪಾವಳಿಯ ದಿನ ಗ್ರಹಣ ಬಂದಿದ್ರೆ, ಇತ್ತ 3 ವರ್ಷಗಳ ಬಳಿಕ ಕೇತುಗ್ರಸ್ತ ಗ್ರಹಣ ಸಂಭವಿಸಲಿದೆ. ಇನ್ನು 15 ದಿನಗಳ ಅಂತರದಲ್ಲೇ ಚಂದ್ರಗ್ರಹಣ ಕೂಡ ಇರೋದ್ರಿಂದ ಜನಸಾಮಾನ್ಯರಿಗೆ ಕುತೂಹಲದ ಜೊತೆಗೆ ಆತಂಕವೂ ಎದುರಾಗಿದೆ. ಈ ಗ್ರಹಣ ಭಾರತದ ಹಲವು ಭಾಗಗಳಲ್ಲಿಯೂ ಗೋಚರವಾಗಲಿದೆ. ಬೆಂಗಳೂರು, ದೆಹಲಿ, ಕೊಲ್ಕತ್ತಾ, ಚೆನ್ನೈ, ವಾರಾಣಸಿ, ಮಥುರಾದಲ್ಲಿ ಈ ಗ್ರಹಣವನ್ನು ಕಾಣಬಹುದು.
ಗ್ರಹಣ ಸಮಯ:
ಗ್ರಹಣ ಆರಂಭ- ಸಂಜೆ 5.12
ಗ್ರಹಣ ಮಧ್ಯಕಾಲ- ಸಂಜೆ 5.49
ಗ್ರಹಣ ಅಂತ್ಯ- ಸಂಜೆ 6.27
ಕರ್ನಾಟಕದ ಬೆಂಗಳೂರು, ಉಡುಪಿ, ರಾಯಚೂರು ಸೇರಿದಂತೆ ಹಲವೆಡೆ ಇಂದು ಸೂರ್ಯಗ್ರಹಣ ಗೋಚರವಾಗುತ್ತದೆ. ಬೆಂಗಳೂರಿನಲ್ಲಿ ಇಂದು ಸಂಜೆ 5.12 ಗಂಟೆಗೆ ಗ್ರಹಣ ಆರಂಭವಾದ್ರೆ ಸಂಜೆ 5.49ಕ್ಕೆ ಮೋಕ್ಷವಾಗಲಿದೆ. ಬಹುತೇಕ ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಿದೆ. ಉಡುಪಿಯಲ್ಲಿ ಇಂದು ಸಂಜೆ 5.08ರಿಂದ 6.29ರವರೆಗೆ ಗ್ರಹಣ ಇರಲಿದೆ. ಮೈಸೂರಿನಲ್ಲಿ ಗ್ರಹಣದ ಸಮಯ- ಸಂಜೆ 5.13 -5.51, ಧಾರವಾಡದಲ್ಲಿ ಗ್ರಹಣದ ಸಮಯ- ಸಂಜೆ 5.01- 5.47, ರಾಯಚೂರಿನಲ್ಲಿ ಗ್ರಹಣದ ಸಮಯ- ಸಂಜೆ 5.01-5.47, ಬಳ್ಳಾರಿಯಲ್ಲಿ ಗ್ರಹಣದ ಸಮಯ- ಸಂಜೆ 5.04-5.48, ಮಂಗಳೂರು- ಗ್ರಹಣದ ಸಮಯ- ಸಂಜೆ 5.10 -5.50.
ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಬಂದು ಸೂರ್ಯನ ಬೆಳಕನ್ನು ತಡೆಯುವುದನ್ನು ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಈ ಭಾಗಶಃ ಸೂರ್ಯಗ್ರಹಣವನ್ನು ಆಂಶಿಕ್ ಸೂರ್ಯ ಗ್ರಹಣ ಎಂದೂ ಕರೆಯುತ್ತಾರೆ. ಸಂಪೂರ್ಣ ಗ್ರಹಣವಾದಾಗ ಸೂರ್ಯನ ಡಿಸ್ಕ್ ಸಂಪೂರ್ಣವಾಗಿ ಚಂದ್ರನಿಂದ ಅಸ್ಪಷ್ಟವಾಗಿರುತ್ತದೆ. ಆದರೆ, ಭಾಗಶಃ ಮತ್ತು ವಾರ್ಷಿಕ ಗ್ರಹಣಗಳಲ್ಲಿ ಸೂರ್ಯನ ಒಂದು ಭಾಗವನ್ನು ಮಾತ್ರ ಅಸ್ಪಷ್ಟಗೊಳಿಸಲಾಗುತ್ತದೆ.










