ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದ ವಿಚಾರಣೆ ನೇರಪ್ರಸಾರ…

57
firstsuddi

ನವದೆಹಲಿ : ಇಂದಿನಿಂದ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದ ವಿಚಾರಣೆಯನ್ನು ಲೈವ್ ಆಗಿ ನೋಡಬಹುದು. ಈ ಕಲಾಪಗಳನ್ನು webcast.gov.in/scindia/ ನಲ್ಲಿ ನೋಡಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಮಂಗಳವಾರ ಮುಖ್ಯ ನ್ಯಾಯಮೂರ್ತಿ ಉದಯ್ ಲಲಿತ್ ಅವರು ಜಡ್ಜ್ ಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ಎಲ್ಲ ಜಡ್ಜ್ ಗಳು ಲೈವ್ ಪ್ರಸಾರ ಅಗತ್ಯ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಸಭೆಯ ಬಳಿಕ ಲೈವ್ ಸ್ಟ್ರೀಮ್ ನಿರ್ಧಾರ ಪ್ರಕಟವಾಗಿತ್ತು.

ಸುಪ್ರೀಂ ಕೋರ್ಟ್ ಮೊದಲಿಗೆ ಯೂಟ್ಯೂಬ್ ಮೂಲಕ ಕಲಾಪಗಳನ್ನು ಲೈವ್-ಸ್ಟ್ರೀಮ್ ಮಾಡಬಹುದು ಮತ್ತು ನಂತರ ಅವುಗಳನ್ನು ತನ್ನ ಸರ್ವರ್ ನಲ್ಲಿ ಹೋಸ್ಟ್ ಮಾಡಬಹುದು ಎಂದು ಮೂಲಗಳು ತಿಳಿಸಿವೆ. ಜನರು ತಮ್ಮ ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಮತ್ತು ಕಂಪ್ಯೂಟರ್ ಗಳಲ್ಲಿ ಯಾವುದೇ ತೊಂದರೆಯಿಲ್ಲದೆ ವಿಚಾರಣೆಗಳನ್ನು ವೀಕ್ಷಿಸಬಹುದು.

ಈ ಆಗಸ್ಟ್ ನಲ್ಲಿ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪ ಲೈವ್ ಆಗಿತ್ತು. ಸಿಜೆಐ ಆಗಿದ್ದ ಎನ್ ವಿ ರಮಣ ಅವರ ನಿವೃತ್ತಿ ದಿನದ ಕಲಾಪವನ್ನು ಲೈವ್ ಮಾಡಲಾಗಿತ್ತು.