ಇನ್ಮುಂದೆ ನಮ್ಮ ರಾಮ ಟೆಂಟ್​​​ನಲ್ಲಿ ವಾಸಿಸುವುದಿಲ್ಲ, ಅದ್ಧೂರಿ ದೇವಾಲಯದಲ್ಲಿ ವಿರಾಜಮಾನನಾಗಿರುತ್ತಾನೆ: ಮೋದಿ.

42
firstsuddi

ಅಯೋಧ್ಯೆ: ನಮ್ಮ ರಾಮಲಲ್ಲಾ ಇನ್ಮುಂದೆ ಟೆಂಟ್​​​ನಲ್ಲಿ ವಾಸಿಸುವುದಿಲ್ಲ, ಅದ್ಧೂರಿ ದೇವಾಲಯದಲ್ಲಿ ವಿರಾಜಮಾನನಾಗಿರುತ್ತಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ ಬಳಿಕ ಬೃಹತ್ ವೇದಿಕೆ ಕಾರ್ಯಕ್ರಮವನ್ನುದ್ದೇಶಿ ಮಾತನಾಡಿದ ಅವರು, ಕೊನೆಗೂ ನಮ್ಮ ರಾಮ ಬಂದಿದ್ದಾನೆ. ಪ್ರತಿಯೊಬ್ಬ ಭಾರತೀಯನ ಅಂತರಂಗದಲ್ಲಿ ನೆಲೆಸಿದ್ದಾನೆ. ಈ ಶುಭ ಸಂದರ್ಭದಲ್ಲಿ ನಾನು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಹೇಳಲು ತುಂಬಾ ವಿಷಯಗಳಿವೆ. ಆದ್ರೆ ಸಂತಸದಿಂದ ನನಗೆ ಮಾತೇ ಬರುತ್ತಿಲ್ಲ. ಇನ್ಮುಂದೆ ನಮ್ಮ ರಾಮ ಟೆಂಟ್​​​ನಲ್ಲಿ ವಾಸಿಸುವುದಿಲ್ಲ, ಅದ್ಧೂರಿ ದೇವಾಲಯದಲ್ಲಿ ವಿರಾಜಮಾನನಾಗಿರುತ್ತಾನೆ. ಈ ಸಮರ್ಪಣೆಯ ಕ್ಷಣವು ಭಗವಾನ್ ರಾಮನ ಆಶೀರ್ವಾದ ಎಂದು ಹೊಗಳಿದರು.

ಮುಂದುವರಿದು, ಈ ಕ್ಷಣ ಅತ್ಯಂತ ಪವಿತ್ರವಾದದ್ದು. 2024 ರ ಜನವರಿ 22 ಇದು ಕೇವಲ ಕ್ಯಾಲೆಂಡರ್‌ನಲ್ಲಿ ಬರುವ ದಿನಾಂಕವಲ್ಲ. ಇದು ಹೊಸ ಯುಗದ ಉದಯ. ಗುಲಾಮಿ ಮನಸ್ಥಿತಿಯನ್ನು ಎದುರಿಸಿ ನಮ್ಮ ರಾಷ್ಟ್ರ ಎದ್ದು ನಿಂತ ಕ್ಷಣವಿದು ಎಂದು ಕೊಂಡಾಡಿದರು. ಜೊತೆಗೆ ಜನವರಿ 22ರಂದು ಸಂಜೆ ಪ್ರತಿಯೊಬ್ಬ ರಾಮಭಕ್ತರ ಮನೆಯಲ್ಲೂ ʻಶ್ರೀರಾಮಜ್ಯೋತಿʼ ಬೆಳಗಿಸುವಂತೆ ಕರೆ ನೀಡಿದರು.

“ರಾಮನ ಅಸ್ತಿತ್ವವನ್ನು ಪ್ರಶ್ನಿಸಲಾಗಿದೆ” ಎಂದು ಹೇಳಿದ ಪ್ರಧಾನಿ, “ಭಾರತದ ಸಂವಿಧಾನದಲ್ಲಿ, ಅದರ ಮೊದಲ ಪುಟದಲ್ಲಿ, ಶ್ರೀರಾಮನಿದ್ದಾನೆ. ಕಾನೂನಿನ ಘನತೆಯನ್ನು ಕಾಪಾಡಿದ್ದಕ್ಕಾಗಿ ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳುತ್ತೇನೆ”. ರಾಮಮಂದಿರ ನಿರ್ಮಾಣಕ್ಕೆ ಕೆಲವರು ಬೆಂಕಿ ಹಚ್ಚುತ್ತಾರೆ ಎಂದು ಎಚ್ಚರಿಸಿದ್ದರು. “ರಾಮನು ಬೆಂಕಿಯಲ್ಲ, ಅವನು ಶಕ್ತಿ. ರಾಮನು ವಿವಾದವಲ್ಲ, ಅವನು ಪರಿಹಾರ. ರಾಮನು ನಮ್ಮವನಲ್ಲ, ಅವನು ಎಲ್ಲರ ರಾಮ” ಎಂದಿದ್ದಾರೆ.