ಉಕ್ರೇನ್ ಮೇಲೆ ರಷ್ಯಾ ದಾಳಿ – ಗಗನಕ್ಕೇರಿದ ಕಚ್ಚಾತೈಲ, ಚಿನ್ನದ ಬೆಲೆ…

70
firstsuddi

ಮಾಸ್ಕೋ : ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬೆನ್ನಲ್ಲೇ ಜಾಗತಿಕ ಕಚ್ಚಾ ತೈಲ ಮತ್ತು ಚಿನ್ನದ ಬೆಲೆಗಳು ಗಗನಕ್ಕೇರಿವೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಗಗನಕ್ಕೇರಿದ್ದು, ಪ್ರತೀ ಬ್ಯಾರೆಲ್ ಕಚ್ಚಾ ತೈಲ ಬೆಲೆ 100 ಡಾಲರ್ ಗಡಿ ದಾಟಿದೆ ಎನ್ನಲಾಗಿದೆ. ಜಾಗತಿಕ ಮಟ್ಟದಲ್ಲಿ ತೈಲಬೆಲೆ ಏರಿಕೆಯಾಗಿರುವುದರಿಂದ ಭಾರತದಲ್ಲೂ ಬೆಲೆ ಏರಿಸುವುದು ಅನಿವಾರ್ಯವಾಗಿದೆ.

ರಷ್ಯಾವು ಪ್ರಪಂಚದ ಎರಡನೇ ಅತಿದೊಡ್ಡ ತೈಲ ಉತ್ಪಾದಕವಾಗಿದ್ದು, ಮುಖ್ಯವಾಗಿ ಯುರೋಪಿಯನ್ ಸಂಸ್ಕರಣಾಗಾರಗಳಿಗೆ ಕಚ್ಚಾ ತೈಲವನ್ನು ಮಾರಾಟ ಮಾಡುತ್ತದೆ ಮತ್ತು ಯುರೋಪ್‌ಗೆ ನೈಸರ್ಗಿಕ ಅನಿಲದ ಅತಿದೊಡ್ಡ ಪೂರೈಕೆದಾರನಾಗಿದೆ.

ಇನ್ನೂ ಚಿನ್ನದ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂದು 24 ಕ್ಯಾರೆಟ್ ನ 10 ಗ್ರಾಂ ಚಿನ್ನಕ್ಕೆ 5,320ರೂ. ಹಾಗೂ 22 ಕ್ಯಾರೆಟ್ನ 10 ಗ್ರಾಂ ಬಂಗಾರಕ್ಕೆ 4,750 ರೂಪಾಯಿಯಾಗಿದೆ. 10 ಗ್ರಾಂ ಚಿನ್ನಕ್ಕೆ 1,500 ರೂ. ಹೆಚ್ಚಳವಾಗಿದೆ. ಜೊತೆಗೆ ನಿನ್ನೆಗಿಂತ ಇಂದು ಬೆಳ್ಳಿ ಬೆಲೆಯಲ್ಲಿ 2,200 ರೂ ಏರಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿಗೆ 68,400 ರೂಪಾಯಿ ಹೆಚ್ಚಳವಾಗಿದೆ.