ಎಚ್ಐವಿ ಟೆಸ್ಟ್ ಗೆ ಹಿಂಜರಿಕೆ ಇದೆಯೇ ? ಇದರಿಂದ ನೀವು ಮನೆಯಲ್ಲಿಯೇ ಕುಳಿತು ಟೆಸ್ಟ್ ಮಾಡಬಹುದು!

628

ಫಸ್ಟ್ ಸುದ್ದಿ : ಎಚ್.ಐ.ವಿ ಸೋಂಕು ನಮಗೂ ತಗುಲಿರಬಹುದೇ ಎಂಬ ಅನುಮಾನ ನಿಮಗೂ ಕಾಡುತ್ತಿದೆಯಾ? ಈ ವಿಚಾರವನ್ನು ಸ್ನೇಹಿತರಿಗೋ ಅಥವಾ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಯಾಕೆಂದರೆ ಹೀಗೆ ಪರೀಕ್ಷೆ ಮಾಡಿಸಿಕೊಳ್ಳಲು ಮುಜುಗರದಿಂದಲೋ ಅಥವಾ ಹಿಂಗರಿಕೆಯಿಂದಲೋ ಸಾಧ್ಯವಾಗಿರುವದಿಲ್ಲ. ಅದಕ್ಕಾಗಿಯೇ ನಿಮ್ಮ ಮನೆಯಲ್ಲಿಯೇ ಎಚ್.ಐ.ವಿ ಸೋಂಕು ಪಾಸಿಟೀವ್ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಎಚ್‌ಐವಿ ಟೆಸ್ಟ್‌ ಮಾಡಿಸಬಹುದು. ಅದು ತುಂಬಾ ಸುಲಭವೂ ಹೌದು. ಸಾಮಾನ್ಯವಾಗಿ ವಸಡುಗಳನ್ನು ಮಸಾಜ್‌ ಮಾಡಿ ನಿಮಗೆ ಎಚ್‌‌ಐವಿ ಇದೆಯೋ ಇಲ್ಲವೋ ಎಂಬುದನ್ನು ಪತ್ತೆ ಮಾಡಬಹದು. ಇನ್ನು ಓರಾಕ್ವಟ್ ಟೆಸ್ಟ್ ಮಾಡಿಸಬೇಕಾಗುತ್ತದೆ. ಓರಾಕ್ವಿಟ್ ಅಂದರೆ ಎಚ್‌‌ಐವಿ ಟೆಸ್ಟ್‌ ಮಾಡುವಂತಹ ಕಿಟ್‌. ಇದು ಪ್ರೆಗ್ನೆನ್ಸಿ ಟೆಸ್ಟ್‌ ಕಿಟ್‌‌ನಂತೆ ಕಾಣಿಸುತ್ತದೆ. ಇದರ ಡಿಸೈನ್‌ ಮತ್ತು ಆಕಾರ ಕೂಡ ಪ್ರೆಗ್ನೆನ್ಸಿ ಟೆಸ್ಟ್‌ ಮಶೀನ್‌ನಂತೆ ಮಾಡಲಾಗಿದೆ.  ಇದರ ಫಲಿತಾಂಶ ಬೇಗನೆ ತಿಳಿದು ಬರುತ್ತದೆ. ಈ ಮಶಿನ್‌ನ ಹೆಸರು ಓರಾಕ್ವೀಕ್‌  ಟೆಸ್ಟ್. ಈ ಓರಾ ಕ್ವಿಕ್‌ ಟೆಸ್ಟ್‌ ವಸಡುಗಳನ್ನು ಟೆಸ್ಟ್‌ ಮಾಡಲು ಬಳಸಲಾಗುತ್ತದೆ. ಮೇಲಿನ ಹಾಗೂ ಕೆಳಗಿನ ವಸಡುಗಳ ಮೇಲೆ ಸರಿಯಾಗಿ ಮಸಾಜ್‌ ಮಾಡಿ, ಈ ಕಿಟ್‌ನ್ನು ವಸಡುಗಳ ಮೇಲೆ ಇಡಿ.ನಂತರ ಈ ಕಿಟ್‌ನಿಂದ 20 ನಿಮಿಷಗಳ ನಂತರ ರಿಸಲ್ಟ್‌ ತಿಳಿದು ಬರುತ್ತದೆ. ಈ ಟೆಸ್ಟ್‌ ಸ್ಟಿಕ್‌ನಲ್ಲಿ ಏನಾದರೂ ಬರೆದಿರುವುದು ಬಂದರೆ, ನಿಮಗೆ ಎಚ್‌‌ಐವಿ ಇಲ್ಲ ಎಂದು ಅರ್ಥ. ಒಂದು ವೇಳೆ ಕಿಟ್‌ನಲ್ಲಿ ಟಿ ಎಂದು ಬರೆದಿದ್ದರೆ ಟೆಸ್ಟ್‌ ಮಾಡಿಸಿದವರಿಗೆ ಎಚ್‌‌ಐವಿ ಪಾಸಿಟಿವ್‌ ಇದೆ ಎಂದು ಅರ್ಥ.