ಎಸ್ಎಸ್ಎಲ್‍ಸಿ ಪರೀಕ್ಷೆ ರದ್ದು ಮಾಡುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ : ಸುರೇಶ್ ಕುಮಾರ್.

221
firstsuddi

ಬೆಂಗಳೂರು : ಸಿಬಿಎಸ್ಇನಂತೆ ನಮ್ಮ ರಾಜ್ಯದಲ್ಲಿ ಎಸ್ಎಸ್ಎಲ್‍ಸಿ ಪರೀಕ್ಷೆ ರದ್ದು ಮಾಡುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸುರೇಶ್ ಕುಮಾರ್ ಅವರು, ಸಿಬಿಎಸ್ಇ ಹತ್ತನೇ ತರಗತಿಗಳ ಪರೀಕ್ಷೆ ರದ್ದಾದ ಹಿನ್ನೆಲೆ ನಮ್ಮ ರಾಜ್ಯದ ಎಸ್ಎಸ್ಎಲ್ಸಿ ಪರೀಕ್ಷೆಗಳ ಕುರಿತು ಈಗಾಗಲೇ ಊಹಾಪೋಹ ಏಳತೊಡಗಿದೆ. ನಮ್ಮ ರಾಜ್ಯದ ಎಸ್ಎಸ್ಎಲ್‍ಸಿ ಪರೀಕ್ಷೆಗಳು ಪ್ರಾರಂಭವಾಗುವುದು ಜೂನ್ 21ರಿಂದ.ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಬೇಕಿರುವುದು ಮೇ 24ರಿಂದ. ಹೀಗಾಗಿ ನಮ್ಮ ರಾಜ್ಯದಲ್ಲಿ ಸಿಬಿಎಸ್ಇ ರೀತಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.