ಏಷ್ಯನ್ ಗೇಮ್ಸ್ 2023: ಮಹಿಳೆಯರ 60 ಕೆ.ಜಿ ವುಶು ಫೈನಲ್‌ನಲ್ಲಿ ಭಾರತಕ್ಕೆ ಬೆಳ್ಳಿ…

76
firstsuddi

ಹ್ಯಾಂಗ್‍ಝೌ: ಏಷ್ಯನ್ ಗೇಮ್ಸ್ ನ ಮಹಿಳೆಯರ 60 ಕೆ.ಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಮಹಿಳೆಯರ 60 ಕೆ.ಜಿ ವುಶು ಸಂಡಾ ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಚೀನಾದ ಹೆವಿವೇಟ್ ವು ಕ್ಸಿಯಾವೊಯ್ ವಿರುದ್ಧ 0-2 ಅಂತರದ ಸೋಲಿನ ನಂತರ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಆಗಿರುವ ವು ಕ್ಸಿಯಾವೊಯಿ ವಿರುದ್ಧ ಭಾರತೀಯ ಆಟಗಾರ್ತಿ ಕಠಿಣ ಹೋರಾಟ ನಡೆಸಿದರು. ಚೀನಾದ ಆಟಗಾರ್ತಿಗೆ ಬಲವಾದ ಆರಂಭವನ್ನು ಪಡೆಯಲು ಅವಕಾಶ ಮಾಡಿಕೊಟ್ಟರು. ಎರಡು ಸುತ್ತುಗಳ ನಂತರ ತೀರ್ಪುಗಾರರು ವು ಕ್ಸಿಯಾವೊಯಿ ಅವರನ್ನು ವಿಜೇತರೆಂದು ಘೋಷಿಸಿದರು. ತನ್ನ ಎದುರಾಳಿಯನ್ನು ಮಣಿಸಲು ಪ್ರಯತ್ನಿಸಿದರು.

ಮೊದಲ ಸುತ್ತು ಆಕ್ರಮಣಕಾರಿ ಆಗಿತ್ತು. ರೋಶಿಬಿನಾ ಅವರನ್ನು ವು ಕ್ಸಿಯಾವೊಯಿ ತಡೆಯಲು ಪ್ರಾರಂಭಿಸಿದರು. ಆದರೂ ಮಣಿಪುರಿ ಅಥ್ಲೀಟ್ ಪುಟಿದೇಳಲು ಪ್ರಯತ್ನಿಸಿದರು. ಆದರೆ, ಮೊದಲ ಸುತ್ತಿನಲ್ಲಿ ವು ಕ್ಸಿಯಾವೊಯಿ 1-0 ಮುನ್ನಡೆ ಸಾಧಿಸಿದರು.

ವು ಕ್ಸಿಯಾವೊಯಿ, ಎರಡನೇ ಸುತ್ತಿನಲ್ಲಿ ರೋಶಿಬಿನಾ ದೇವಿಯ ಮೇಲೆ ಪ್ರಬಲವಾದ ದಾಳಿ ಮಾಡುವ ಮೂಲಕ ಚಿನ್ನ ಗಳಿಸಿದರು. ಜಕಾರ್ತದಲ್ಲಿ ನಡೆದ 2018ರ ಆವೃತ್ತಿಯಲ್ಲಿ ಕಂಚು ಗೆದ್ದಿದ್ದ ರೋಶಿಬಿನಾ ಅವರು ಇದೀಗ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದಾರೆ.