ಐದು ಐಪಿಎಸ್ ಅಧಿಕಾರಿಗಳ ವರ್ಗಾವಣೆ…

78
firstsuddi

ಬೆಂಗಳೂರು : ಐದು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಡ್ಯ ನೂತನ ಎಸ್‌ಪಿಯಾಗಿ ಎನ್. ಯತೀಶ್, ಉತ್ತರ ಕನ್ನಡ ಎಸ್‌ಪಿಯಾಗಿ ಸುಮನ್ ಡಿ. ಪನ್ನೇಕರ್, ಕಲಬುರ್ಗಿ ಎಸ್ ಪಿಯಾಗಿ ಇಷಾ ಪಂತ್, ಗದಗದ ಎಸ್ ಪಿಯಾಗಿ ಎಸ್.ಪಿ. ದೇವರಾಜ್, ಮೈಸೂರಿನ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿಯಾಗಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಅ. 20ರಂದು ಮಂಡ್ಯ ಎಸ್ಪಿ ಡಾ.ಎಂ. ಅಶ್ವಿನಿ ಅವರನ್ನು ವರ್ಗಾವಣೆಗೊಳಿಸಿದ್ದ ಸರ್ಕಾರ ಆ ಜಾಗಕ್ಕೆ ಸುಮನ್ ಡಿ. ಪನ್ನೇಕರ್ ಅವರನ್ನು ನೇಮಕ ಮಾಡಿತ್ತು. ಆದರೆ, ಸುಮನ್ ಡಿ. ಪನ್ನೇಕರ್ ಅವರಿಗೆ ಎಸ್ಪಿ ಆಗಿ ಅಧಿಕಾರ ವಹಿಸಿಕೊಳ್ಳದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದರು. ಇದರಿಂದ ಸುಮಾರು 10 ದಿನಗಳಿಂದ ಮಂಡ್ಯ ಎಸ್ಪಿ ಸ್ಥಾನ ಖಾಲಿಯಿತ್ತು. ಇದೀಗ ಮತ್ತೆ ಸುಮನ್ ಪನ್ನೇಕರ್ ಅವರನ್ನು ಉತ್ತರ ಕನ್ನಡದ ಎಸ್​ ಪಿಯಾಗಿ ವರ್ಗಾವಣೆ ಮಾಡಲಾಗಿದ್ದು,  ವರ್ಗಾವಣೆಗೊಂಡಿರುವ ಐದು ಐಪಿಎಸ್ ಅಧಿಕಾರಿಗಳಿಗೂ ತುರ್ತಾಗಿ ಕೆಲಸಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.