ಚಿಕ್ಕಮಗಳೂರು : ಐಸಿಎಸ್ಇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಗರದ ಕುವೆಂಪು ವಿದ್ಯಾನಿಕೇತನ ಶಾಲೆ ಸತತ 8ನೇ ಬಾರಿ ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ.
ಶಾಲೆಯ 26 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಎದುರಿಸಿದ್ದು, ಅವರಲ್ಲಿ ಎಲ್ಲರೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ವಿ.ಯು.ಜೀವನ್ ಶೇ.97.4 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ವಿ.ಎ.ನಿಕ್ಷೇಪ್ ಶೇ.96.2, ಐ.ಎಸ್.ಪ್ರತೀಕ್ಷ ಶೇ.96, ಪ್ರಣವ್ ಆರ್.ರಾವ್ ಶೇ.94.4., ವಿ.ಎಂ.ಅಧಿಕ ಶೇ 93.4, ಸಿ.ಜೆ.ಧ್ವನಿತ್ 93.4 ಅಂಕ ಗಳಿಸಿದ್ದಾರೆ.










