ಒಂದೇ ದಿನದಲ್ಲಿ ಎರಡು ರೀತಿಯ ತನಿಖಾ ವರದಿ ಸಲ್ಲಿಸಿದ ಮೈಸೂರು ಪ್ರಾದೇಶಿಕ ಆಯುಕ್ತ..!

89
firstsuddi

ಮೈಸೂರು : ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಿಸಿದ್ದರು. ಈ ವಿಚಾರ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ತನಿಖೆಗೆ ಸರ್ಕಾರ ಆದೇಶಿಸಿತ್ತು. ಇದೀಗ ತನಿಖಾ ವರದಿ ಬಂದಿದ್ದು, ಈ ತನಿಖಾ ವರದಿಯೂ ವಿವಾದಕ್ಕೆ ಕಾರಣವಾಗಿದೆ.

ಈಜುಕೊಳ ನಿರ್ಮಾಣದ ತನಿಖೆಯ ಜವಾಬ್ದಾರಿ ಹೊತ್ತಿದ್ದ ಪ್ರಾದೇಶಿಕ ಆಯುಕ್ತರು, ಒಂದೇ ದಿನದಲ್ಲಿ ಎರಡು ತನಿಖಾ ವರದಿ ಸಲ್ಲಿಸಿದ್ದಾರೆ.  ಮೊದಲ ವರದಿಯಲ್ಲಿ ಒಟ್ಟು 6 ನ್ಯೂನತೆ ನಮೂದಿಸಲಾಗಿದ್ದು, ಪ್ರಮುಖವಾಗಿ ಈಜುಕೊಳದ ನಿರ್ಮಾಣಕ್ಕೆ ತಯಾರಾಗಿದ್ದ 32 ಲಕ್ಷ ರೂ ಅಂದಾಜುಪಟ್ಟಿಗೆ ಲೋಕೋಪಯೋಗಿ ಇಲಾಖೆ ಅನುಮೋದನೆ ಪಡೆದಿಲ್ಲ ಹಾಗೂ ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳಿಲ್ಲ ಎಂದು ನಮೂದು ಮಾಡಲಾಗಿತ್ತು. ಆದರೆ, ಎರಡನೇ ತನಿಖಾ ವರದಿಯಲ್ಲಿ ಪ್ರಮುಖವಾದ ಈ ಎರಡು ಅಂಶ ದಿಢೀರ್ ಎಂದು ಕೈ ಬಿಟ್ಟಿದ್ದಾರೆ.

ಪ್ರಾದೇಶಿಕ ಆಯುಕ್ತರು ಕೊಟ್ಟ ಮೊದಲ ವರದಿಯಲ್ಲಿ ಈಜುಕೊಳ ನಿರ್ಮಾಣದಲ್ಲಿ ಆಗಿರೋ ಆರ್ಥಿಕ ವಿಚಾರ ಗೌಪ್ಯವಾಗಿರೋದೆ ಪ್ರಮುಖ ಲೋಪ ಎಂದು ಪರೋಕ್ಷವಾಗಿ ನಮೂದಾಗಿತ್ತು. ಆದರೆ ಇದೇ ಅಂಶವನ್ನೇ ಕೈಬಿಟ್ಟು ದಿಢೀರ್ ಎರಡನೇ ಎಡಿಟೆಡ್ ವರದಿಯನ್ನು ಕೊಡಲಾಗಿದ್ದು, ಪ್ರಾದೇಶಿಕ ಆಯುಕ್ತರ ತನಿಖಾ ವರದಿ ಬಗ್ಗೆಯೆ ಹಲವು ಅನುಮಾನಗಳು ಸೃಷ್ಟಿಯಾಗಿದೆ.