ಓಮಿಕ್ರಾನ್‍ನಿಂದ ಚೇತರಿಸಿಕೊಂಡ ಸೋಂಕಿತರ ಡಿಸ್ಚಾರ್ಜ್‍ಗೆ ಹೊಸ ಮಾರ್ಗಸೂಚಿ ಜಾರಿ..

78
firstsuddi

ಬೆಂಗಳೂರು : ಒಮಿಕ್ರಾನ್ ಸೋಂಕಿನಿಂದ ಚೇತರಿಸಿಕೊಂಡ ನಂತರ ಡಿಸ್ಜಾರ್ಜ್ ಮಾಡಲು ಕರ್ನಾಟಕ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.

ಹೊಸ ಮಾರ್ಗಸೂಚಿಗಳೇನು?
ಡಿಸ್ಟಾರ್ಜ್ ಆಗುವ ಮುನ್ನ 3 ದಿನದಲ್ಲಿ ಯಾವುದೇ ರೀತಿಯ ಜ್ವರ ಅಥವಾ ಯಾವುದೇ ರೋಗ ಲಕ್ಷಣ ಇರಬಾರದು, ಯಾವುದೇ ರೋಗ ಲಕ್ಷಣಗಳು ಇಲ್ಲ ಅಂದರೆ 10 ದಿನಕ್ಕೆ ಡಿಸ್ಜಾರ್ಜ್ ಮಾಡಬಹುದು, ಡಿಸ್ಟಾರ್ಜ್ ಆದ ಮೇಲೆ ರೋಗ ಲಕ್ಷಣ ಕಂಡು ಬಂದರೆ ಏನು ಮಾಡಬೇಕು? ಏನು ತಗೋಬೇಕು ಅಂತಾ ಸಲಹೆ ನೀಡಬೇಕು, ಒಮಿಕ್ರಾನ್ ರೋಗಿಗೆ ಡಿಸ್ಜಾರ್ಜ್ ಮಾಡಬೇಕಾದ್ರೆ ಎರಡು ಬಾರಿ ಆರ್ ಟಿಪಿಸಿಆರ್ ಟೆಸ್ಟ್ ಮಾಡಿ ನೆಗೆಟಿವ್ ಇದ್ರೆ ಮಾತ್ರ ಡಿಸ್ಟಾರ್ಜ್ ಮಾಡಬೇಕು.

ಯಾವುದೇ ಆಕ್ಸಿಜನ್ ಸಪೋರ್ಟ್ ಇಲ್ಲದೇ 4 ದಿನಗಳ ಕಾಲ 95% ಆಕ್ಸಿಜನ್ ಲೆವೆಲ್ ಇದ್ದರೆ ಡಿಸ್ಟಾರ್ಜ್ ಮಾಡಬಹುದು, ಆರ್ ಟಿಪಿಸಿಆರ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ 48 ಗಂಟೆಗಳ ಬಳಿಕ ಮತ್ತೆ ಸ್ವ್ಯಾಬ್ ಕಲೆಕ್ಟ್ ಮಾಡಿ ಆರ್ ಟಿಪಿಸಿಆರ್ ಟೆಸ್ಟ್ ಮಾಡಬೇಕು,ಡಿಸ್ಚಾರ್ಜ್ ಆದ ವ್ಯಕ್ತಿಗೆ ಹೋಂ ಕ್ವಾರಂಟೈನ್ ಅಥವಾ ಸೆಲ್ಫ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆ ನೀಡಬೇಕು, ಹೋಂ ಕ್ವಾರಂಟೈನ್ನಲ್ಲಿ ಇರುವ ವ್ಯಕ್ತಿಗೆ ಮತ್ತೆ 6ನೇ ದಿನಕ್ಕೆ ಆರ್ ಟಿಪಿಸಿಆರ್ ಟೆಸ್ಟ್ ಮಾಡಬೇಕು, ಜಿಲ್ಲಾ ಕಣ್ಗಾವಲು ಅಧಿಕಾರಿ ವ್ಯಕ್ತಿಯ ಆರೋಗ್ಯ ಸ್ಥಿತಿಗಾಗಿ ಅವರ ಮನೆಗಳಲ್ಲಿ ಭೇಟಿ ನೀಡಬೇಕು ಎಂದು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.