ಕನ್ನಡದ ಪ್ರಧಾನ ಮಂತ್ರಿ 10 ತಿಂಗಳು ಕೆಲಸ ಮಾಡಿದ್ದರು ಆಗ ಬಾಂಬ್ ದಾಳಿ ಹಾಗೂ ಅಮಾಯಕರ ಬಲಿ ನಡದಿತ್ತಾ ? : ಹೆಚ್.ಡಿ. ಕುಮಾರಸ್ವಾಮಿ…

335
firstsuddi

ಚಿಕ್ಕಮಗಳೂರು : ಜಿಲ್ಲೆಯ ಕೊಪ್ಪದಲ್ಲಿ ಚುನಾವಣಾ ಪ್ರಚಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತಿ ಹೆಚ್.ಡಿ. ಕುಮಾರಸ್ವಾಮಿ ಅವರು ನನಗೆ ಎರಡು ವರ್ಷದ ಹಿಂದೆಯೇ ನಿವೃತ್ತ ಯೋಧರೊಬ್ಬರು 2019 ಕ್ಕೆ ಎರಡು ದೇಶಗಳ ನಡುವೆ ಸಂಘರ್ಷ ಸನ್ನಿವೇಶ ಎಂಬುದನ್ನು ಇವರು ಸೃಷ್ಠಿ ಮಾಡುತ್ತಾರೆ ಎಂದು ಹೇಳಿದ್ದರು. ಪಾಕಿಸ್ತಾನ ಹಾಗೂ ಭಾರತದ ನಡುವೆ ಸಂಘರ್ಷ ಎನ್ನುವ ಸನ್ನಿವೇಶ ಸೃಷ್ಠಿ ಮಾಡಿ ಜನರನ್ನು ದಾರಿ ತಪ್ಪಿಸಿ ಮತ ಕೇಳಲು ಬರುತ್ತಾರೆ ಬರೆದಿಟ್ಟುಕೊಳ್ಳಿ ಎಂದು ಮಾಜಿ ಸೈನಿಕ ಅಧಿಕಾರಿಯೊಬ್ಬರು ಹೇಳಿದ್ದರು. ಎರಡು ವರ್ಷದ ಹಿಂದೆಯೇ ನನ್ನ ಬಳಿ ಚರ್ಚೆ ಮಾಡಿದ್ದು, ಮುಂದಿನ ಲೋಕಸಭಾ ಚುನಾವಣೆಗೆ ಮುನ್ನಾ ಇಂತಹ ಸನ್ನಿವೇಶ ಸೃಷ್ಠಿ ಮಾಡುತ್ತಾರೆ. ಇದನ್ನು ಇಟ್ಟುಕೊಂಡು ಏನಾದರು ಕಥೆ ಸೃಷ್ಟಿ ಮಾಡಿ ಮೋದಿ ಮತ ಕೇಳುತ್ತಾರೆ ಎಂದಿದ್ದರು. ಇವತ್ತು ಅದೇ ರೀತಿಯಲ್ಲಿ ಆಗಿದೆ. ದೇಶವನ್ನು ಸುಭದ್ರವಾಗಿ ನಡೆಸುವ ಪ್ರಧಾನ ಮಂತ್ರಿ ಬೇಕೆಂದು ಹೇಳುತ್ತಿದ್ದಾರೆ. ಹಾಗಾದರೆ ದೇಶವನ್ನು 70 ವರ್ಷ ಅಭದ್ರತೆಯಲ್ಲಿ ಆಡಳಿತ ನಡೆಸಿದರಾ. ನಾನು ನಿಮ್ಮನ್ನು ಕೈ ಜೋಡಿಸಿ ಮನವಿ ಮಾಡುತ್ತೇನೆ ಮೋದಿಯನ್ನು ನಂಬಬೇಡಿ. ದೇಶದಲ್ಲಿ ಕನ್ನಡದ ಪ್ರಧಾನ ಮಂತ್ರಿ 10 ತಿಂಗಳು ಕೆಲಸ ಮಾಡಿದ್ದಾರೆ. ಆಗ ಎಲ್ಲಾದರೂ ಬಾಂಬ್ ದಾಳಿ ಹಾಗೂ ಅಮಾಯಕರ ಬಲಿ ನಡದಿತ್ತಾ. ಯೋಧರನ್ನು ಗುಂಡಿಕ್ಕಿ ಕೊಲ್ಲುವ ಘಟನೆ ಆಗ ನಡೆದಿತ್ತ. ನಿಮ್ಮನ್ನು ದಾರಿ ತಪ್ಪಿಸುವ ಇಂತಹ ಪ್ರಧಾನ ಮಂತ್ರಿ ನಿಮಗೆ ಬೇಕಾ? ಇವರಿಗೆ ಅಭಿವೃದ್ಧಿ ಬದಲು ಧರ್ಮದ ರಾಜಕಾರಣ ಬೇಕಾಗಿದೆ ಎಂದು ಹೇಳಿದ್ದಾರೆ.