ಕರ್ನಾಟಕದಲ್ಲಿ ಕೊರೊನಾ ವೈರಸ್‍ಗೆ ಮೊದಲ ಬಲಿ-ದೇಶದಲ್ಲೇ ಮೊದಲ ಸಾವು…

231
firstsuddi

ಕಲಬುರಿಗೆ : ವಿಶ್ವದಾಧ್ಯಂತ ಭೀತಿ ಹೆಚ್ಚಿಸಿರುವ ಮಹಾಮಾರಿ ವೈರಸ್‍ಗೆ ಕರ್ನಾಟಕದಲ್ಲಿ ಮೊದಲ ಬಲಿಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಮೃತ ವ್ಯಕ್ತಿಯನ್ನು ಕಲಬುರಗಿಯ ಮೊಹಮ್ಮದ್ ಹುಸೇನ್ ಸಿದ್ದಿಕ್(76) ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿ ಫೆಬ್ರವರಿ-29ರಂದು ದುಬೈನಿಂದ ಕಲಬುರಗಿಗೆ ವಾಪಸ್ಸಾಗಿದ್ದರು. ದುಬೈಯಿಂದ ಬರುತ್ತಿದ್ದಂತೆ ಅವರನ್ನು ತಪಾಸಣೆ ನಡೆಸಿ ಕೊರೊನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ ಚಿಕಿತ್ಸೆಗಾಗಿ ಹೈದರಾಬಾದ್‍ಗೂ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಹೈದರಾಬಾದ್‍ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.