ಕರ್ನಾಟಕ ದಲಿತ ಸಂಘರ್ಷ ಸಮಿತಿ: ಮೈಸೂರು ವಿಭಾಗೀಯ ಸಂಚಾಲಕರಾಗಿ ಮೂರ್ತಿಹಾಳ್ ಕೃಷ್ಣಪ್ಪ, ಕಡೂರು ತಾಲೂಕು ಸಂಚಾಲಕರಾಗಿ ಮೇಲನಹಳ್ಳಿ ಪ್ರಭು ಆಯ್ಕೆ…

64
firstsuddi

ಚಿಕ್ಕಮಗಳೂರು:- ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ. ಬಿ ಕೃಷ್ಣಪ್ಪ ಬಣ) ಮೈಸೂರು ವಿಭಾಗೀಯ ಸಂಚಾಲಕರಾಗಿ ಮೂರ್ತಿಹಾಳ್ ಕೃಷ್ಣಪ್ಪ ಹಾಗೂ ಕಡೂರು ತಾಲೂಕು ಸಂಚಾಲಕರಾಗಿ ಮೇಲನಹಳ್ಳಿ ಪ್ರಭು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘಟನಾ ಸಂಚಾಲಕರಾಗಿ ಬಾಸೂರು ಹರೀಶ್. ಶಿವಣ್ಣ ಹುಲ್ಲೇಹಳ್ಳಿ. ಹನುಮಂತರಾಯ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಕೆ ಜಿ ಮೈಲಾರಪ್ಪ ಸಚಿನ್ ಓಂಕಾರಪ್ಪ ಆಯ್ಕೆಯಾಗಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಆರ್ ಪಾಂಡುರಂಗ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡರಾದ ತರೀಕೆರೆ ಎನ್ ವೆಂಕಟೇಶ್, ಕೊಡಿಗಾಲ್ ರಮೇಶ್ ಮುನಿಯಪ್ಪ ಸಭೆಯಲ್ಲಿ ಪಾಲ್ಗೊಂಡಿದ್ದರು.