ಕಲಬುರಗಿಯಲ್ಲಿ ಭೂಕಂಪನ ; 3.4 ತೀವ್ರತೆ ದಾಖಲು…

42
firstsuddi

ಕಲಬುರಗಿ : ಜಿಲ್ಲೆಯ ಹಲವೆಡೆ ಲಘು ಭೂಕಂಪನದ ಅನುಭವ ಉಂಟಾಗಿದೆ. ಬೆಳಗ್ಗೆ 9.48ರ ಸಮಯದಲ್ಲಿ 5 ಸೆಕೆಂಡ್ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 3.4ರಷ್ಟು ಕಂಪನದ ತೀವ್ರತೆ ದಾಖಲಾಗಿದೆ.

ಸೇಡಂ ತಾಲೂಕಿನ ಕೋಡ್ಲಾ, ಬೆನಕನಹಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದು, ಗ್ರಾಮಸ್ಥರು ಮನೆಯಿಂದ ಓಡಿ ಬಂದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಗಳಿಗೆ ಅಧಿಕಾರಿಗಳು ದೌಡಾಯಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.