ಕಲ್ಲು ಸಾಗಾಟದ ಟೆಂಪೊ ಪಲ್ಟಿ – ಚಾಲಕನಿಗೆ ಗಂಭೀರ ಗಾಯ…

189
firstsuddi

ಉಡುಪಿ : ಕಲ್ಲುಗಳನ್ನು ಸಾಗಿಸುತ್ತಿದ್ದ ಟೆಂಪೊವೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡಿರುವ ಘಟನೆ ಶಿರ್ವ ಸಮೀಪದ ಸೈಂಟ್ ಮೇರಿಸ್ ಶಾಲೆಯ ಬಳಿ ಸಂಭವಿಸಿದೆ. ಇಂದು ಬೆಳಿಗ್ಗೆ ಶಿರ್ವ ಕಡೆಯಿಂದ ಕಟಪಾಡಿ ಯತ್ತ ಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಟೆಂಪೊವೊಂದು ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಟೆಂಪೊ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಶಿರ್ವ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.