ಕಾಬೂಲ್ ಕಾನ್ವೆಂಟ್ ನಲ್ಲಿ ಸುರಕ್ಷಿತವಾಗಿದ್ದೇನೆ : ಸಿಸ್ಟರ್ ಥೆರೆಸಾ ಕ್ರಾಸ್ತಾ ಆಡಿಯೋ ಸಂದೇಶ…

96
firstsuddi

ಮಂಗಳೂರು : ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಮಂಗಳೂರು ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ತಾ ಅವರು ಆಡಿಯೋ ಸಂದೇಶವೊಂದನ್ನು ಕಳುಹಿಸಿ ತಾನು ಕಾಬೂಲ್ ಕಾನ್ವೆಂಟ್ ನಲ್ಲಿ ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಆಡಿಯೋ ಮೆಸೇಜ್ :

ನಾನು ಕೆಲಸ ಮಾಡುವ ಇಟೆಲಿಯ ಸಂಸ್ಥೆಯು ನನ್ನ ಸುರಕ್ಷತೆಗೆ ರೋಮ್ ನಲ್ಲಿರುವ ಇಟಾಲಿಯನ್ ಕಾನ್ಸುಲೇಟ್ ಮೂಲಕ ಕ್ರಮ ಕೈಗೊಂಡಿದೆ ಹಾಗೂ ಸುರಕ್ಷಿತವಾಗಿ ಇಟೆಲಿಗೆ ಕರೆದೊಯ್ಯಲು ಕೆಲವೇ ದಿನಗಳಲ್ಲಿ ವ್ಯವಸ್ಥೆ ಮಾಡುವುದಾಗಿ ತಿಳಿಸಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೊಂದಲ ಇರುವುದರಿಂದ ಈಗ ವಿಮಾನ ನಿಲ್ದಾಣದೊಳಗೆ ಯಾರಿಗೂ ಪ್ರವೇಶ ಇಲ್ಲ. ಹಾಗಾಗಿ ನಮ್ಮ ಪ್ರಯಾಣವನ್ನು ಮುಂದೂಡಲಾಗಿದೆ. ವಿಮಾನ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವಾಗ ನಮ್ಮನ್ನು ಕರೆದೊಯ್ಯುವರು. ಭಾರತೀಯ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿದ್ದು, ಅದರ ಜತೆಗೂ ಸಂಪರ್ಕದಲ್ಲಿದ್ದೇನೆ. ನಮ್ಮ ಸುರಕ್ಷತೆಗೆ ಅವರೆಲ್ಲರೂ ವ್ಯವಸ್ಥೆ ಮಾಡುತ್ತಿದ್ದಾರೆ. ನಿಮ್ಮೆಲ್ಲರ ಸಹಕಾರಕ್ಕೆ ತುಂಬು ಹೃದಯದ ಕೃತಜ್ಞತೆಗಳು ಎಂದು ಹೇಳಿದ್ದಾರೆ.

ಥೆರೆಸಾ ಕ್ರಾಸ್ತಾ ಅವರನ್ನು ಅವರು ಕೆಲಸ ಮಾಡುತ್ತಿರುವ ಇಟೆಲಿಯ ಸಂಸ್ಥೆ 3 ವರ್ಷಗಳ ಹಿಂದೆ ಅಫ್ಘಾನಿಸ್ಥಾನಕ್ಕೆ ಕಳುಹಿಸಿದ್ದು, ಅಲ್ಲಿ ಅವರು ಬುದ್ಧಿ ಮಾಂದ್ಯ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.