ಕಾರಿನಲ್ಲಿದ್ದ ಹೀಟರ್ ಸ್ಪೋಟ- ಓರ್ವ ಮಹಿಳೆ ಸಜೀವ ದಹನ…

298
firstsuddi

ಬೀದರ್ : ಕಾರಿನಲ್ಲಿದ್ದ ಹೀಟರ್ ಸ್ಪೋಟಗೊಂಡು ಮಹಿಳೆ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ನಿರ್ಣಾ ಕ್ರಾಸ್ ಬಳಿ ನಡೆದಿದೆ. ಮೃತ ಮಹಿಳೆಯನ್ನು ಕಲ್ಯಾಣಿ(42) ಎಂದು ಗುರುತಿಸಲಾಗಿದ್ದು, ಕಾರಿನಲ್ಲಿ 4ಮಂದಿ ಮಹಾರಾಷ್ಟ್ರದ ಉದಗೀರ್ ನಿಂದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ವೇಳೆ ಬೆಳಗ್ಗಿನ ಜಾವ ಅತಿಯಾದ ಚಳಿಯಿದ್ದ ಕಾರಣ ಹೀಟರ್ ಹಾಕಿ ಕಾರನ್ನು ಚಲಾಯಿಸಿದ್ದಾರೆ. ಹೀಗಾಗಿ ಅತಿಯಾಗಿ ಬಿಸಿ ಮಾಡಿ ಕಾರು ಚಲಾಯಿಸಿದ ಪರಿಣಾಮ ಹೀಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರಿಗೆ ಬೆಂಕಿ ತಗುಲಿದ ಆತಂಕದಿಂದ ಸೀಟ್ ಬೆಲ್ಟ್ ತೆಗೆಯಲಾಗದೆ ಮಹಿಳೆ ಸೀಟ್‍ನಲ್ಲಿಯೇ ಸಜೀವ ದಹನವಾಗಿದ್ದು, ಘಟನೆಯಲ್ಲಿ ಪತಿ ಉದಯಕುಮಾರ್ ಹಾಗೂ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮನ್ನಾಖೇಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.