ಹುಬ್ಬಳ್ಳಿ : ಸ್ಟ್ರೆಚರ್ ಇಲ್ಲದೆ ಆಕ್ಸಿಜನ್ ಅಳವಡಿಸಿದ ಮಗುವನ್ನು ತಂದೆ ಕೈಯಲ್ಲೇ ಹೊತ್ತುಕೊಂಡು ಸಾಗಿರುವ ಮನಕಲಕುವ ಘಟನೆ ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಕಿಮ್ಸ್ ಸಿಬ್ಬಂದಿಯ ನಿರ್ಲಕ್ಷತನ ಎತ್ತಿ ತೋರಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನಾರೋಗ್ಯದಿಂದ ಆಕ್ಸಿಜನ್ ಅಳವಡಿಸಿದ ಮಗುವನ್ನು ಮಕ್ಕಳ ವಾರ್ಡಿಗೆ ಸಾಗಿಸಲು ಸ್ಟ್ರೆಚ್ಚರ್ನ ವ್ಯವಸ್ಥೆ ಇಲ್ಲದಕ್ಕೆ ತಂದೆ ಕೈಯಲ್ಲೇ ಮಗುವನ್ನು ಹೊತ್ತು ಸಾಗಿದ್ದು, ಈ ಮನಕಲುಕುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬೇಜವಾಬ್ದಾರಿ ತೋರಿದ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










