ಬೆಂಗಳೂರು : ರಾಜ್ಯದಲ್ಲಿ ನಿನ್ನೆಯವರೆಗೂ ದಿನಕ್ಕೆ ಎರಡು ಬಾರಿ ಬಿಡುಗಡೆ ಮಾಡುತ್ತಿದ್ದ ಕೊರೊನಾ ಹೆಲ್ತ್ ಬುಲೆಟಿನ್ ಅನ್ನು ಇಂದಿನಿಂದ ದಿನಕ್ಕೆ ಒಂದೇ ಬಾರಿ ಬಿಡುಗಡೆ ಮಾಡಲು ರಾಜ್ಯ ಆರೋಗ್ಯ ಇಲಾಖೆ ನಿರ್ಧಾರ ಮಾಡಿದ್ದು, ಕೊರೊನಾ ಟಾಸ್ಕ್ ಫೋರ್ಸ್ ನ ಸೂಚನೆಯಂತೆ ದಿನಕ್ಕೆ ಒಂದೇ ಬಾರಿ ಅಂದರೆ ಸಂಜೆ ಮಾತ್ರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲು ರಾಜ್ಯ ಆರೋಗ್ಯ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದು ಬಂದಿದೆ.










