ಕುಂಭಮೇಳದಲ್ಲಿ ಕಾಲ್ತುಳಿತ: ಸಂತ್ರಸ್ತರ ಮೃತದೇಹಗಳು ಇಂದು ಸಂಜೆ ರಾಜ್ಯಕ್ಕೆ; ಕೃಷ್ಣ ಬೈರೇಗೌಡ.

25

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ಕು ಮಂದಿ ಸಾವನ್ನಪ್ಪಿದ್ದು, ಸಂತ್ರಸ್ತರ ಮೃತದೇಹಗಳನ್ನು ಇಂದು ಸಂಜೆ ರಾಜ್ಯಕ್ಕೆ ತರಲಾಗುವುದು. ಈ ಸಂಬಂಧ ಹಿರಿಯ ಅಧಿಕಾರಿಗಳು ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಇಂದು ತಿಳಿಸಿದ್ದಾರೆ. ಐಪಿಎಸ್ ಅಧಿಕಾರಿ ಹರಿರಾಮ್ ಶಂಕರ್ ಅವರು ಕುಂಭಮೇಳದಿಂದ ನಾಲ್ವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರುವ ವಿಚಾರವಾಗಿ ಅಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. 2 ಆಂಬ್ಯುಲೆನ್ಸ್‍ಗಳಲ್ಲಿ ದೆಹಲಿಯತ್ತ ಮೃತದೇಹಗಳನ್ನು ಕೊಂಡೊಯ್ಯಲಾಗುತ್ತಿದೆ. ಬೆಳಗಾವಿಯ ವಿಶೇಷ ಡಿಸಿ ಹರ್ಷ ದೆಹಲಿಯತ್ತ ತೆರಳಿದ್ದು, ಸಂಜೆ ವೇಳೆಗೆ ಪಾರ್ಥಿವ ಶರೀರದೊಂದಿಗೆ ಬೆಳಗಾವಿ ತಲುಪಲಿದ್ದಾರೆ ಎಂದು ಮಾಧ್ಯಮ ಸಂಸ್ಥೆ ಎಎನ್‍ಐಗೆ ತಿಳಿಸಿದರು.