ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವಾಗ ನಾನು ಸಿಎಂ ಸ್ಥಾನಕ್ಕೆ ಪೈಪೋಟಿಗೆ ಬರುವುದಿಲ್ಲ : ಹೆಚ್.ಡಿ. ರೇವಣ್ಣ…

176
firstsuddi

ಹಾಸನ : ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಅವರು ಕೂಡಾ ಸಿಎಂ ಸ್ಥಾನಕ್ಕೆ ಅರ್ಹರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಹೆಚ್.ಡಿ. ರೇವಣ್ಣ ಅವರು ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಇರುವ ಗೌರವದಿಂದ ಆ ರೀತಿ ಹೇಳಿರಬಹುದು. ಸಿದ್ದರಾಮಯ್ಯ ಹಾಗೂ ನಾನು ಹಿಂದಿನಿಂದಲೂ ಆತ್ಮೀಯರು. ನಾನು ಅವರ ಅಭಿಮಾನಿಯಾಗಿ ಅವರ ಹೇಳಿಕೆಗೆ ಪ್ರತಿಕ್ರಯಿಸುವುದಿಲ್ಲ. ಅಲ್ಲದೇ ಸಿಎಂ ಹುದ್ದೆ ಸದ್ಯಕ್ಕೆ ಖಾಲಿಯಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವಾಗ ನಾನು ಆ ಸ್ಥಾನಕ್ಕೆ ಪೈಪೋಟಿಗೆ ಬರುವುದಿಲ್ಲ. ನಾವು ಅಣ್ಣ ತಮ್ಮಂದಿರು ಈ ವಿಷಯವಾಗಿ ಹೊಡೆದಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.