ಕೆ-ಸಿಇಟಿ ಫಲಿತಾಂಶ ಪ್ರಕಟ- ಈ ಬಾರಿಯೂ ವಿದ್ಯಾರ್ಥಿನಿಯರೇ ಮೆಲುಗೈ…

66
firstsuddi

ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (ಕೆ-ಸಿಇಟಿ) ಫಲಿತಾಂಶವನ್ನು ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರು ಇಂದು ಪ್ರಕಟಿಸಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೆಲುಗೈ ಸಾಧಿಸಿದ್ದಾರೆ.

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ 2.03 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ, 1.64 ಲಕ್ಷ ಅಭ್ಯರ್ಥಿಗಳು ಬಿಎಸ್‍ಸಿ (ಕೃಷಿ), 1.66 ಲಕ್ಷ ಅಭ್ಯರ್ಥಿಗಳು ಬಿಎಸ್‍ಸಿ ವೆಟರಿನರಿ ಸೈನ್ಸ್, 1.66 ಲಕ್ಷ ನ್ಯಾಚುರೋಪತಿ ಮತ್ತು ಯೋಗ (ಬಿಎನ್‌ವೈಎಸ್), 2.06 ಲಕ್ಷ ಬಿ ಫಾರ್ಮಾ-06 ಲಕ್ಷ, ಮತ್ತು 2.06 ಲಕ್ಷ ಅಭ್ಯರ್ಥಿಗಳು ಡಿ ಫಾರ್ಮ್ ಕೋರ್ಸ್ ಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.

ಈ ವರ್ಷ, ವಿಜಯಪುರ ಜಿಲ್ಲೆಯು ಬಿಎನ್‌ವೈಎಸ್ (ಶೇ 89.19), ಎಂಜಿನಿಯರಿಂಗ್ (ಶೇ 93.36), ಬಿಎಸ್‌ಸಿ (ಅಗ್ರಿ) (ಶೇ 88.88) ಮತ್ತು ಬಿಎಸ್‌ಸಿ ನರ್ಸಿಂಗ್ (ಶೇ 89.19) ಕೋರ್ಸ್‌ಗಳಲ್ಲಿ ಅತಿ ಹೆಚ್ಚು ಅರ್ಹ ಅಭ್ಯರ್ಥಿಗಳನ್ನು ಹೊಂದಿದೆ. ಬಿ ಫಾರ್ಮ್ ಮತ್ತು ಡಿ ಫಾರ್ಮ್ ಕೋರ್ಸ್‌ಗಳಲ್ಲಿ, ದಕ್ಷಿಣ ಕನ್ನಡವು ಕ್ರಮವಾಗಿ ಶೇಕಡಾ 95.35 ಮತ್ತು 95.44 ರಷ್ಟು ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಹೊಂದಿದೆ. ಯಾದಗಿರಿಯು ಕಡಿಮೆ ಸಂಖ್ಯೆಯ ಅಭ್ಯರ್ಥಿಗಳನ್ನು ಹೊಂದಿದ್ದು, ಫಾರ್ಮಾ-ಡಿಯಲ್ಲಿ ಅತಿ ಹೆಚ್ಚು ಶೇಕಡಾ 9.78 ಮತ್ತು ಕಡಿಮೆ ಬಿಎಸ್‌ಸಿ (ಅಗ್ರಿ) ನಲ್ಲಿ ಶೇಕಡಾ 5.61 ರಷ್ಟು ಅಭ್ಯರ್ಥಿಗಳು ಇದ್ದಾರೆ.

ಕೆಇಎ ನೀಡಿರುವ ಅಂಕಿಅಂಶಗಳ ಪ್ರಕಾರ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಒಟ್ಟು 2.6 ಲಕ್ಷ ಅಭ್ಯರ್ಥಿಗಳಲ್ಲಿ 2.44 ಲಕ್ಷ ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಈ ವರ್ಷ ಹೆಚ್ಚಿನ ಟಾಪರ್ ಗಳು ಬೆಂಗಳೂರು ಜಿಲ್ಲೆಯವರಾಗಿದ್ದರೆ, ಧಾರವಾಡ, ಬಳ್ಳಾರಿ ಮತ್ತು ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಟಾಪರ್‌ಗಳು ಬಂದಿದ್ದಾರೆ. ಓರ್ವ ಟಾಪರ್ ಕಾರ್ತಿಕ್ ಮನೋಹರ್ ಸಿಂಹಸನ್ ರಾಜಸ್ಥಾನದಿಂದ ಪರೀಕ್ಷೆ ಬರೆದವರಾಗಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್‍ನಲ್ಲಿ ಬೆಂಗಳೂರು ಟಾಪ್ 10ರಲ್ಲಿ ಎಂಟು ರ‍್ಯಾಂಕ್ ಪಡೆದುಕೊಂಡಿದೆ. ಇನ್ನು ಧಾರವಾಡ ಮತ್ತು ಬಳ್ಳಾರಿ ಕೂಡ ತಲಾ ಒಂದು ರ‍್ಯಾಂಕ್ ಬಂದಿದೆ. ಹಾಗೆಯೇ ಯೋಗ ಮತ್ತು ನ್ಯಾಚುರೋಪತಿ ಕೋರ್ಸ್‍ನಲ್ಲಿ ಬೆಂಗಳೂರಿಗೆ 5 ರ‍್ಯಾಂಕ್ ಬಂದಿದ್ದು, ಮಂಗಳೂರಿಗೆ 2, ಹುಬ್ಬಳ್ಳಿಗೆ 1, ರಾಜಸ್ಥಾನ 1, ದಾವಣಗೆರೆಯಲ್ಲಿ ಓರ್ವ ವಿದ್ಯಾರ್ಥಿ ರ‍್ಯಾಂಕ್ ಪಡೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್, ಈ ವರ್ಷ ವಿದ್ಯಾರ್ಥಿಗಳಿಗೆ ಗಣಿತ ಮತ್ತು ಭೌತಶಾಸ್ತ್ರದಲ್ಲಿ ತಲಾ ಗ್ರೇಸ್ ಮಾರ್ಕ್ ನೀಡಲಾಗಿದೆ. ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ನರ್ಸಿಂಗ್ ಕೋರ್ಸ್‌ಗಳಿಗೆ ಕೆಇಎ ಶ್ರೇಯಾಂಕಗಳನ್ನು ಸೇರಿಸಲು ಇದೇ ಮೊದಲ ಬಾರಿಗೆ ನಿರ್ಧರಿಸಿದೆ ಎಂದರು.