ನವದೆಹಲಿ : ಜೆಕ್ ಗಣರಾಜ್ಯದಲ್ಲಿ ನಡೆಯುತ್ತಿರುವ ಟಬೋರ್ ಅಥ್ಲೆಟಿಕ್ ಮೀಟ್‍ನಲ್ಲಿ ಭಾರತದ ಮಿಂಚಿನ ಓಟಗಾರ್ತಿ ಹಿಮಾ ದಾಸ್ 200ಮೀ ಓಟದ ವಿಭಾಗದಲ್ಲಿ 23.25 ಸೆಕೆಂಡ್‍ಗಳಲ್ಲಿ ತಮ್ಮ ಓಟವನ್ನು ಪೂರ್ಣಗೊಳಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಹಿಮಾದಾಸ್ ಅವರು ಜುಲೈ 2ರಂದು ಪೋಲೆಂಡ್‍ನಲ್ಲಿ ನಡೆದ ಪೊಜ್ನಾನ್ ಅಥ್ಲೆಟಿಕ್ ಗ್ರಾಂಡ್ ಫ್ರಿಕ್ಸ್ನಲ್ಲಿ 200ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ, ಜುಲೈ 7ರಂದು ಪೋಲೆಂಡ್‍ನಲ್ಲಿ ನಡೆದ ಕುಟ್ನೋ ಅಥ್ಲೆಟಿಕ್ ಮೀಟ್‍ನಲ್ಲಿ 200ಮೀ ಸ್ಪರ್ಧೆಯಲ್ಲಿ ಚಿನ್ನದ ಪದಕ, ಹಾಗೂ ಜುಲೈ 13ರಂದು ಜೆಕ್ ಗಣರಾಜ್ಯದಲ್ಲಿ ನಡೆದ ಕ್ಲಡ್ನೋ ಮೆಮೋರಿಯಲ್ ಅಥ್ಲೆಟಿಕ್ಸ್ನಲ್ಲಿ 200ಮೀ ವಿಭಾದಲ್ಲಿ ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಳ್ಳುವ ಮೂಲಕ ಕೇವಲ 15ದಿನಗಳಲ್ಲಿ 4ನೇ ಅಂತರಾಷ್ಟ್ರೀಯ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.










