ಕೊಡಗು: ನಿಶಾನಿ ಬೆಟ್ಟದಲ್ಲಿ ಕಾಡಾನೆ ದಾಳಿಗೆ ವೃದ್ಧ ಬಲಿ…

37
firstsuddi

ಕೊಡಗು: ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ನಿಶಾನಿ ಬೆಟ್ಟದಲ್ಲಿ ಆನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ವರದಿಯಾಗಿದೆ.

ಅಪ್ಪಚ್ಚು (60) ಆನೆ ದಾಳಿಗೆ ಬಲಿಯಾಗಿರುವ ವೃದ್ಧ. ನಿಶಾನಿ ಬೆಟ್ಟಕ್ಕೆ ಚಾರಣ ತೆರಳಿದವರಿಗೆ ವೃದ್ಧನ ಶವ ಕಂಡು ಬಂದಿದ್ದು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಶನಿವಾರ ಸಂಜೆಯಿಂದ ಅಪ್ಪಚ್ಚು ಕಾಣೆಯಾಗಿದ್ದು, ನಿನ್ನೆ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಘಟನಾ ಸ್ಥಳ ಮತ್ತು ಆಸುಪಾಸಿನಲ್ಲಿ ಆನೆ ನಡೆದಾಡಿದ ಹೆಜ್ಜೆ ಗುರುತುಗಳು ಕಂಡುಬಂದಿದ್ದರಿಂದ ಆನೆ ದಾಳಿಯಿಂದ ಸಾವು ಎಂದು ಸಂಶಯಿಸಲಾಗಿದೆ.

ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.