ಕೊಪ್ಪಳ : ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಲಾಗಿದೆ ಎಂದು ಡಿ.ಎಚ್.ಓ ಟಿ.ಲಿಂಗರಾಜ್ ಅವರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಎರಡನೇ ಅಲೆಯಲ್ಲಿ 100ಕ್ಕೂ ಹೆಚ್ಚು ಗರ್ಭಿಣಿಯರಿಗೆ ಪಾಸಿಟಿವ್ ಆಗಿತ್ತು. ಕೊಪ್ಪಳ ತಾಲ್ಲೂಕು 33, ಗಂಗಾವತಿ ತಾಲ್ಲೂಕು 32, ಯಲಬುರ್ಗಾ ತಾಲ್ಲೂಕು 45, ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ 12 ಗರ್ಭಿಣಿಯರಲ್ಲಿ ಸೋಂಕು ಕಾಣಿಸಿಕೊಂಡಿತ್ತು.
80 ಕ್ಕೂ ಹೆಚ್ಚು ಜನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ರು. ಇದರಲ್ಲಿ 54 ಜನರಿಗೆ ಯಶಸ್ವಿಯಾಗಿ ಹೆರಿಗೆಯನ್ನು ಮಾಡಲಾಗಿದೆ. ಇದರಲ್ಲಿ 26 ಜನರಿಗೆ ನಾರ್ಮಲ್ ಡೆಲಿವರಿ, 28 ಸಿಜೇರಿಯನ್ ಮಾಡಿದ್ದು, ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ. ಇದು ಸಂತಸದ ವಿಷಯ ಎಂದು ಹೆರಿಗೆ ವಿಭಾಗದ ಮುಖ್ಯಸ್ಥರಿಗೆ ಡಿ.ಹೆಚ್.ಓ ಧನ್ಯವಾದ ಸಲ್ಲಿಸಿದ್ದು, ಹೆರಿಗೆಯಾದ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿಲ್ಲ. ಆದರೆ ಬೇರೆ ಬೇರೆ ಜಿಲ್ಲೆಯಲ್ಲಿ ಹೆರಿಗೆಯಾದ ಬಳಿಕ ಐದು ಜನರಿಗೆ ಪಾಸಿಟಿವ್ ಕಂಡುಬಂದಿದೆ. ಅವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಂತಹ ಮಕ್ಕಳಿಗೆ ವಿಶೇಷ ನವಜಾತ ಶಿಶು ತೀವ್ರ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಲ್ಲೂ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಡಿ.ಹೆಚ್.ಓ ಮಾಹಿತಿ ನೀಡಿದ್ದಾರೆ.










