ವಾಷಿಂಗ್ಟನ್ : ಕೊರೊನಾ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸಿ 90 ದಿನಗಳಲ್ಲಿ ಈ ಸಂಬಂಧ ನನಗೆ ವರದಿ ನೀಡಿ” ಎಂದು ಬೈಡನ್ ಗುಪ್ತಚರ ಸಂಸ್ಥೆಗೆ ಸೂಚಿಸಿದ್ದಾರೆ.
ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಮೂಲದ ಬಗ್ಗೆ ಮತ್ತೆ ತನಿಖೆ ಆರಂಭವಾಗಿದ್ದು, ಜಾಗತಿಕ ವಿಜ್ಞಾನಿಗಳ ತಂಡವೊಂದು ಇದರ ಅಧ್ಯಯನ ಮುಂದುವರೆಸಿರುವಂತೆಯೇ ಇತ್ತ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಕೋವಿಡ್ ವೈರಸ್ ನ ಮೂಲದ ಬಗ್ಗೆ ತನಿಖೆ ನಡೆಸಿ 90 ದಿನಗಳಲ್ಲಿ ವರದಿ ನೀಡುವಂತೆ ತಮ್ಮ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.
ಇನ್ನೂ ಈ ಕುರಿತು ಮಾಹಿತಿ ನೀಡಿರುವ ಜೋ ಬೈಡನ್ ಅವರು, ‘ಕೊರೋನಾ ವೈರಸ್ ಮೂಲದ ಕುರಿತು ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲು ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಈ ಪ್ರಯತ್ನದಲ್ಲಿ ನಮ್ಮ ನ್ಯಾಷನಲ್ ಲ್ಯಾಬ್ಸ್ ಮತ್ತು ನಮ್ಮ ಸರ್ಕಾರದ ಇತರ ಇಂಟೆಲಿಜೆನ್ಸ್ ಏಜೆನ್ಸಿಗಳು ಪ್ರಯತ್ನಗಳನ್ನು ಹೆಚ್ಚಿಸಲು ಕೆಲಸ ಮಾಡಬೇಕೆಂದು ನಾನು ಕೇಳಿದ್ದೇನೆ ಎಂದರು.
2019ರ ಡಿಸೆಂಬರ್ ನಲ್ಲಿ ಮೊದಲ ಕೋವಿಡ್ ಪ್ರಕರಣ ಚೀನಾದ ವುಹಾನ್ನಲ್ಲಿ ವರದಿಯಾಗಿತ್ತು. ಉದ್ದೇಶಪೂರ್ವಕವಾಗಿ ಸೋಂಕು ಹರಡಲು ಚೀನಾ ತನ್ನ ವುಹಾನ್ನ ಪ್ರಯೋಗಾಲಯದಲ್ಲೇ ವೈರಸ್ ಸೃಷ್ಟಿಸಿದೆ ಎಂದು ಅಮೆರಿಕ ಗುಪ್ತಚರ ಸಂಸ್ಥೆ ಆರೋಪಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಹೆಚ್ಒ) ತಜ್ಞರು ವುಹಾನ್ ಸೇರಿದಂತೆ ಚೀನಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಚೀನಾ ಅಧ್ಯಯನ ತಂಡದೊಂದಿಗೆ ಸೇರಿ ತನಿಖೆ ನಡೆಸಿತ್ತು. ತನಿಖೆ ಬಳಿಕ ಡಬ್ಲ್ಯುಹೆಚ್ಒ, ಇದರ ಹಿಂದೆ ಚೀನಾ ಕೈವಾಡವಿಲ್ಲವೆಂದು ತಿಳಿಸಿತ್ತು.










