ಕೋಟ್ಯಾಧೀಶನಾದ ಮಲೆ ಮಹದೇಶ್ವರ – ಹುಂಡಿಯಲ್ಲಿ 2.83 ಕೋಟಿ ರೂ. ಸಂಗ್ರಹ…

75
firstsuddi

ಚಾಮರಾಜನಗರ : ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದ್ದು, ಬರೋಬ್ಬರಿ 2.83 ಕೋಟಿ ರೂ. ಸಂಗ್ರಹವಾಗಿದೆ.

ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ನಿನ್ನೆ ಬೆಳಗ್ಗೆಯಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದಿದ್ದು, 28 ದಿನಗಳಲ್ಲಿ ಒಟ್ಟು 2.83 ಕೋಟಿ ರೂ. ಸಂಗ್ರಹವಾಗಿದೆ. ಜೊತೆಗೆ 3.8 ಕೆಜಿ ಬೆಳ್ಳಿ ಹಾಗೂ 73 ಗ್ರಾಂ ಚಿನ್ನವನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ.