ಕೌಟುಂಬಿಕ ಕಲಹ ; ಪತ್ನಿ, ಮಗಳನ್ನೇ ಹತ್ಯೆಗೈದ!

82
firstsuddi

ಸೇಡಂ/ಕಲಬುರಗಿ : ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಮಗಳನ್ನೇ ಕೊಲೆ ಮಾಡಿರುವ ಘಟನೆ ಪಟ್ಟಣದ ವಿಶ್ವನಗರ ಬಡಾವಣೆಯಲ್ಲಿ ನಡೆದಿದೆ.

ಜಗದೇವಿ (35) ಹಾಗೂ ಪ್ರಿಯಾಂಕಾ (11) ಮೃತ ದುರ್ದೈವಿಗಳು. ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಕಲಬುರಗಿ ನಿವಾಸಿ ದಿಗಂಬರ ಹಣಮಂತಪ್ಪ ಗಾಂಜಲಿ (47) ಕೊಲೆ ಮಾಡಿದ ಆರೋಪಿ. ಈತ ತನ್ನ ಪತ್ನಿ ಹಾಗೂ ಮಗಳನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.