ಗಂಡನಿಂದ ದೂರಾದ ನಂತರ ಜೊತೆಗಿದ್ದ ಪ್ರಿಯಕರನ ಬಿಟ್ಟು ಬೇರೊಬ್ಬನ ಸಂಗಡ ಮಾಡಿದ್ದಕ್ಕೆ ತಾಯಿ ಮಗುವಿನ ಹತ್ಯೆ…

70
firstsuddi

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ತಾಯಿ ಮತ್ತು ಮಗುವಿನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ತಿಳಿದುಬಂದಿದೆ. ಗಂಡನಿಂದ ದೂರಾದ ನಂತರ ಜೊತೆಗಿದ್ದ ಪ್ರಿಯಕರನ ಬಿಟ್ಟು ಬೇರೊಬ್ಬನ ಜೊತೆ ಸ್ನೇಹ ಮಾಡಿದ್ದೇ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮಗು ಹತ್ಯೆಗೆ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ.

ನವನೀತ (35) ಮತ್ತು ಈಕೆಯ ಎಂಟು 8 ವರ್ಷದ ಮಗ ಸೃಜನ್ ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಪ್ರಿಯಕರ ಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದ ಮಹಿಳೆ ನವನೀತ ತನ್ನ ಪತಿ ಚಂದ್ರುವಿನಿಂದ ಬೇರ್ಪಟ್ಟು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಕಳೆದ 2 ವರ್ಷಗಳಿಂದ ಮಗ ಸೃಜನ್ ಜೊತೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನವನೀತ ಗಂಡನಿಂದ ದೂರಾದ ಮೇಲೆ ಆರೋಪಿ ಶೇಖರ್ ಜೊತೆಗೆ ಸ್ನೇಹ ಬೆಳೆಸಿದ್ದಳು. ಬಳಿಕ ಇಬ್ಬರು ಪ್ರೀತಿ ಮಾಡೋಕೆ ಶುರು ಮಾಡಿದ್ದರು.

ಆದರೆ ನವನೀತ ಇತ್ತೀಚೆಗೆ ಶೇಖರ್ ಬಿಟ್ಟು ಲೋಕೇಶ್ ಎಂಬಾತನೊಂದಿಗೆ ಸಂಪರ್ಕ ಹೊಂದಿದ್ದಳು. ಇದನ್ನ ಕಂಡ ಮೊದಲ ಪ್ರಿಯಕರ ಶೇಖರ್, ಆತನ ಸಹವಾಸ ಬಿಡುವಂತೆ ನವನೀತಳಿಗೆ ಎಚ್ಚರಿಕೆ ನೀಡಿದ್ದನು. ಆಕೆಯ ಮೇಲೆ ಹಲ್ಲೆಯೂ ನಡೆಸಿದ್ದನು. ಆದರೂ ನವನೀತ ಲೋಕೇಶ್ ಜೊತೆಗೆ ಸಂಪರ್ಕ ಹೊಂದಿದ್ದಳು.

ಇಷ್ಟೆಲ್ಲಾ ಆದ ಮೇಲೂ ನವನೀತ ಲೋಕೇಶ್ ಜೊತೆ ಸಂಬಂಧ ಮುಂದುವರೆಸಿದ್ದಾಳೆ. ಇದರಿಂದ ಕೋಪಗೊಂಡ ಶೇಖರ್, ಶನಿವಾರ ಎಂದಿನಂತೆ ನವನೀತಳ ಮನೆಗೆ ಬಂದಿದ್ದಾನೆ. ಹೀಗೆ ಮನೆಗೆ ಬಂದ ಶೇಖರ್, ಜ್ಯೂಸ್ ತರುವಂತೆ ನವನೀತಳ 8 ವರ್ಷದ ಮಗನನ್ನು ಅಂಗಡಿಗೆ ಕಳುಹಿಸಿದ್ದಾನೆ. ನಂತರ ನವನೀತಳ ಜೊತೆ ಜಗಳ ಶುರು ಮಾಡಿದ್ದ ಶೇಖರ್, ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ.

ಇತ್ತ, ಅಂಗಡಿಯಿಂದ ಜ್ಯೂಸ್ ತೆಗೆದುಕೊಂಡು ಬಂದಿದ್ದ ಬಾಲಕನಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆ ಎಂದು ನಂಬಿಸಿ ಸೀರೆಯಿಂದ ಕೈ ಕಾಲುಗಳನ್ನು ಕಟ್ಟಿ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಎರಡು ಮೃತ ದೇಹಗಳನ್ನು ರೂಮಿನಲ್ಲಿ ಮಂಚದ ಮೇಲೆ ಎಸೆದು ಪರಾರಿಯಾಗಿದ್ದಾನೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.