ಗ್ಯಾಂಗ್ ರೇಪ್ ಪ್ರಕರಣ ; ಸಂತ್ರಸ್ತ ಯುವತಿ ಪತ್ತೆ…

71
firstsuddi

ಬೆಂಗಳೂರು : ನಗರದಲ್ಲಿ ಬಾಂಗ್ಲಾ ಮೂಲದ ಯುವತಿಯ ಮೇಲೆ ಆಕೆಯ ಸ್ನೇಹಿತರೇ ಅತ್ಯಾಚಾರವೆಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತ ಯುವತಿಯನ್ನು ಪತ್ತೆ ಹಚ್ಚಿದ್ದು, ರಾಮಮೂರ್ತಿ ನಗರದ ಪೊಲೀಸರ ವಿಶೇಷ ತಂಡ ಕೇರಳದ ಕಲ್ಲಿಕೋಟೆಯಿಂದ ನಗರಕ್ಕೆ ಕರೆ ತರುತ್ತಿದ್ದಾರೆ.

ಘಟನೆ ಬಳಿಕ ಸಂತ್ರಸ್ತ ಯುವತಿ ತನ್ನ ಸ್ನೇಹಿತ ಲಕ್ಷ್ಮಿಲಾಲ್ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಸದ್ಯ ಮಾಹಿತಿ ಬಳಿಕ ನಗರದಿಂದ ಕೇರಳಕ್ಕೆ ತೆರಳಿರುವ ಇನ್ಸ್ ಪೆಕ್ಟರ್, ಮಹಿಳಾ ಪಿಎಸ್ಐ, ಮಹಿಳಾ ಕಾನ್ಸ್ ಟೇಬಲ್ ಹಾಗೂ ಸಿಬ್ಬಂದಿ ತಂಡ ನಗರಕ್ಕೆ ಕರೆ ತರುತ್ತಿದ್ದಾರೆ.