ಚಿಕ್ಕಮಗಳೂರು : ಎಲ್ಲಾ ಸದ್ಗುಣಗಳ ಬೇರು ನಮ್ರತೆ : ಡಾ|| ಎ.ಗೀತಪ್ರಕಾಶ್.

141
Firstsuddi

ಚಿಕ್ಕಮಗಳೂರು : ಎಲ್ಲಾ ಸದ್ಗುಣಗಳ ಬೇರು ನಮ್ರತೆ ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ|| ಎ.ಗೀತಪ್ರಕಾಶ್ ಹೇಳಿದರು.
ನಗರದ ಲಯನ್ಸ್ ಸೇವಾ ಭವನದಲ್ಲಿ ನಿನ್ನೆ ನಡೆದ ಲಯನ್ಸ್ ಸಂಸ್ಥೆಗೆ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಾವೆಲ್ಲರೂ ನಾನು, ನನ್ನದು ಎಂದು ಸದಾ ತಿರುಗಾಡುತ್ತಿರುತ್ತೇವೆ, ನಾನು ನನ್ನದು ಎನ್ನುವುದು ನಮ್ಮಲ್ಲಿ ಅಹಂಕಾರವನ್ನು ಬೆಳೆಸುತ್ತದೆ, ಅದರಿಂದ ನಮ್ಮ ವ್ಯಕ್ತಿತ್ವ ಕುಂದುತ್ತದೆ ಎಂದ ಅವರು ಲಯನ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಇದನ್ನು ಅರಿಯಬೇಕು, ನಾನು ನನ್ನದು ಎನ್ನುವುದನ್ನು ಬಿಟ್ಟು ನಾವು ಎಂಬುವುದನ್ನು ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಜಿಲ್ಲೆಯ ಪ್ರಥಮ ಮಹಿಳೆ ಡಾ|| ಗಾಯತ್ರಿ ಗೀತಪ್ರಕಾಶ್, ಚಿಕ್ಕಮಗಳೂರು ಲಯನ್ಸ್ ಅಧ್ಯಕ್ಷರು ಮತ್ತು ಅವರ ತಂಡ ಕೊರೋನಾ ಸಂಕಷ್ಟದ ನಡುವೆಯೂ ಹಲವು ಸೇವಾ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಸಿ.ಪಿ.ಸುರೇಶ್ ತಮ್ಮ ಅವಧಿಯಲ್ಲಿ ಮಾಡಿರುವ ಸೇವಾ ಕಾರ್ಯಗಳನ್ನು ವಿವರಿಸಿ ಅದಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ನಿತ್ಯದಾನಿ ಹೆಚ್.ಸಿ.ಶಶಿಪ್ರಸಾದ್, ಸಂಸ್ಥೆಯ ಸಂಸ್ಥಾಪಕ ಸದಸ್ಯ ಮುನೀರ್ ಅಹಮದ್, ಜಿಲ್ಲಾ ರಾಜ್ಯಪಾಲ ಡಾ|| ಎ.ಗೀತಪ್ರಕಾಶ್ ದಂಪತಿಯನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಅರ್.ಹರೀಶ್ ಮತ್ತು ಸರಳ ಶ್ರೀಧರ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ವೇಳೆ ಜಿಲ್ಲಾ ರಾಜ್ಯಪಾಲರ ಪ್ರತಿನಿಧಿ ಭಾರತಿ ಅವರು ಲಯನ್ಸ್ ಕ್ಲಬ್‍ನ ಸಾಮಾಜಿಕ ಸೇವಾ ಕಾರ್ಯಗಳಿಗಾಗಿ 25 ಸಾವಿರ ರೂ ದೇಣಿಗೆ ನೀಡಿದರು.

ವಲಯಾಧ್ಯಕ್ಷೆ ಅನುಸೂಯ ಜಗದೀಶ್, ಪ್ರೊ|| ಹೆಚ್.ಎಸ್.ಜಗಧೀಶಪ್ಪ, ಕಾರ್ಯದರ್ಶಿ ಮನೋಜ್ ಬಸವರಾಜ್, ಖಜಾಂಚಿ ಜೆ.ಜಿ.ಜಯರಾಮೇಗೌಡ, ಕೆ.ಎಂ.ಮಂಜುನಾಥ್ ಗೌಡ, ಜಿಲ್ಲಾ ಮೊದಲನೇ ರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ, ದ್ವಿತೀಯ ರಾಜ್ಯಪಾಲ ಸಂಜೀವಶೆಟ್ಟಿ ಉಪಸ್ಥಿತರಿದ್ದರು.