ಚಿಕ್ಕಮಗಳೂರು : ಕಾಫಿ ನಾಡ ದೊರೆ ವಿ.ಜಿ ಸಿದ್ದಾರ್ಥ ಅವರಿಗೆ ಜೆಡಿಎಸ್ ಕಚೇರಿಯಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು…

775
firstsuddi

ಚಿಕ್ಕಮಗಳೂರು : ಉದ್ಯಮಿ ವಿ.ಜಿ ಸಿದ್ದಾರ್ಥ ಅವರಿಗೆ ನಗರದ ಜೆಡಿಎಸ್ ಕಚೇರಿಯಲ್ಲಿ ಇಂದು ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಿದ್ದಾರ್ಥ ಅವರ ಭಾವಚಿತ್ರಕ್ಕೆ ಪಕ್ಷದ ಪದಾದಿಕಾರಿಗಳು ಮತ್ತು ಕಾರ್ಯಕರ್ತರು ಪುಷ್ಪನಮನ ಸಲ್ಲಿಸುವುದರ ಜೊತೆಗೆ ಅವರ ಆತ್ಮಕ್ಕೆ ಶಾಂತಿ ಕೋರಿ 1 ನಿಮಿಷ ಮೌನಚರಣೆ ಮಾಡಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಬಿ.ಬಿ ನಿಂಗಯ್ಯ ಸಿದ್ದಾರ್ಥ ಅವರ ಸಾವಿಗೆ ಐಟಿ ಇಲಾಖೆ ಅಧಿಕಾರಿಗಳ ಕಿರುಕುಳ ಕಾರಣ ಎಂದು ಆರೋಪಿಸಿದರು.
ನಿರೀಕ್ಷೆಗೂ ಮೀರಿ ಎತ್ತರಕ್ಕೆ ಬೆಳೆದಿದ್ದ ಸಿದ್ದಾರ್ಥ ಅವರು 50ಸಾವಿರ ಕುಟುಂಬಗಳಿಗೆ ಉದ್ಯೋಗ ನೀಡಿದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಕಾಫಿ ಉದ್ಯಮಕ್ಕೆ ಮತ್ತು ಬೆಳೆಗಾರರಿಗೆ ಗೌರವ, ಪ್ರತಿಷ್ಟೆ ತಂದು ಕೊಟ್ಟಿದ್ದರು, ಅವರ ಸಾವಿನಿಂದ ಮನೆ ಮಗನನ್ನು ಕಳೆದುಕೊಂಡಂತ್ತಾಗಿದೆ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್ ದೇವರಾಜ್ ಮಾತನಾಡಿ ಸಿದ್ದಾರ್ಥ ಅವರ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ದ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಮಾತನಾಡಿ ಸಿದ್ದಾರ್ಥ ಅವರ ಸಾವಿನಿಂದ ತಮ್ಮ ಸ್ವಂತ ಅಣ್ಣನನ್ನು ಕಳೆದುಕೊಂಡಾಗಿದೆ ಎಂದು ಹೇಳಿದರು.
ಪಕ್ಷದ ಮುಖಂಡರಾದ ಜಿ.ಎಸ್ ಚಂದ್ರಪ್ಪ, ಮಂಜಪ್ಪ, ಹೊಲದಗದ್ದೆ ಗಿರೀಶ್, ಮಾನುಮಿರಾಂಡ ಎನ್. ದೇವರಾಜ್ ಅರಸ್, ಬೈರೇಗೌಡ, ಜಯರಾಜ್ ಅರಸ್ ಹಾಜರಿದ್ದರು.