ಚಿಕ್ಕಮಗಳೂರು ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಎಂ.ನಾರಾಯಣ್ ಆಯ್ಕೆ…

65
firstsuddi

ಚಿಕ್ಕಮಗಳೂರು : ನಗರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಎಂ.ನಾರಾಯಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಅಧ್ಯಕ್ಷರಾಗಿದ್ದ ಹೆಚ್.ಎನ್.ಗಂಗಾಧರ್ ಅವರು ನಿಧನರಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಗರದ ಸಂಘದ ಕಛೇರಿಯಲ್ಲಿ ಇಂದು ಚುನಾವಣೆ ನಡೆಯಿತು.

ಅಧ್ಯಕ್ಷ ಗಾದಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಡಿ.ಟಿ.ನಾಗರಾಜ್. ನಾರಾಯಣ್ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಚುನಾವಣೆ ನಂತರ ನಡೆದ ಸಮಾರಂಭದಲ್ಲಿ ಗಣ್ಯರು ವಿವಿಧ ಸಂಘ ಸಂಸ್ಥೆಗಳ ಮುಖಂಡರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ನೂತನ ಅಧ್ಯಕ್ಷ ಹೆಚ್.ಎಂ.ನಾರಾಯಣ್ ಸಂಘದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವುದರ ಜೊತೆಗೆ ಸಂಘವನ್ನು ಸಹಕಾರಿ ಬ್ಯಾಂಕ್ ಆಗಿ ಮಾಡುವ ಗುರಿಯನ್ನು ತಾವು ಹೊಂದಿದ್ದು, ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷೆ ಎಲ್.ಕೆ.ರುಕ್ಮಿಣಿ ಮೂರ್ತಿ, ನಿರ್ದೇಶಕರಾದ ಸಿ.ಎಸ್.ಕುಬೇರ, ಎಲ್.ವಿ.ಕೃಷ್ಣಮೂರ್ತಿ, ಎಲ್.ಕೆ.ವೇಣುಗೋಪಾಲ್, ಸಿ.ಎಸ್.ಏಕಾಂತರಾಮು, ಸಿ.ಎಂ.ವೇಣುಗೋಪಾಲ್, ಬಿ.ಎಂ.ಕುಮಾರ್, ಸಿ.ಡಿ.ರವೀಂದ್ರ ನಾಯ್ಕ್, ಸಿ.ಈ.ಗೀತಾ, ಕೆ.ವಿಶ್ವನಾಥ್ ಉಪಸ್ಥಿತರಿದ್ದರು.