ಚಿಕ್ಕಮಗಳೂರು : ಪೂಜೆಗೆ ಬಂದು ಪ್ರಸಾದ ಸ್ವೀಕರಿಸಿದ ಹನುಮಾನ್…

310

ಚಿಕ್ಕಮಗಳೂರು : ತಾಲ್ಲೂಕಿನ ಕಳಾಸಪುರದ ಶಿವು ಎಂಬುವವರ ಕುಟುಂಬ ಒಂದು ತಿಂಗಳ ಹಿಂದೆ ಕಾಶಿ ಯಾತ್ರೆ ಪೂರೈಸಿ ಬಂದಿದ್ದು, ಮನೆಯಲ್ಲಿ ಪವಮಾನ ಹೋಮ ಮಾಡಿಸಲಾಗಿತ್ತು. ಹೋಮ ನಡೆಯುತ್ತಿದ್ದ ಸ್ಥಳಕ್ಕೆ ನೇರವಾಗಿ ಮಂಗ ಬಂದಿದ್ದು, ಅಲ್ಲಿ ಇಟ್ಟಿದ್ದ ಹಣ್ಣು ಹಂಪಲುಗಳನ್ನು ಮುಟ್ಟದೇ ದೇವರ ನೈವೇಧ್ಯಕ್ಕೆ ಇಟ್ಟಿದ್ದ ಮೊಸರನ್ನವನ್ನು ಸ್ವೀಕರಿಸಿದ್ದು ಆಶ್ಚರ್ಯಕರವಾಗಿತ್ತು. ಅಲ್ಲಿ ಸೇರಿದ 200ಕ್ಕೂ ಹೆಚ್ಚು ಕುಟುಂಬಸ್ಥರು ದೇವರೇ ನಮ್ಮ ಮನೆಗೆ ಬಂದಿದ್ದಾನೆ ಎಂದು ಪವಮಾನ,ಪವಮಾನ ಎಂದು ಹಾಡು ಹೇಳಿ ಭಕ್ತಿ ಮೆರೆದಿದ್ದಾರೆ